ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನಲ್ಲಿ 10 ದಿನಗಳ ವಿಪಶ್ಶನ ಧ್ಯಾನದಲ್ಲಿ ಭಾಗವಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ರಾಷ್ಟ್ರ ರಾಜಧಾನಿಗೆ ಮರಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕೇಜ್ರಿವಾಲ್, ’10 ದಿನಗಳ ವಿಪಶ್ಶನ ಧ್ಯಾನದ ಬಳಿಕ ಇಂದು ಮರಳಿದ್ದೇನೆ. ಈ ಧ್ಯಾನವು ಅಪಾರ ಶಾಂತಿಯನ್ನು ನೀಡುತ್ತದೆ. ಇಂದಿನಿಂದ ಮತ್ತೆ ಹೊಸ ಚೈತನ್ಯದೊಂದಿಗೆ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸುತ್ತೇನೆ. ಎಲ್ಲರಿಗೂ ಶುಭವಾಗಲಿ’ ಎಂದು ತಿಳಿಸಿದ್ದಾರೆ.
10 दिन की विपश्यना साधना के बाद आज वापिस लौटा। इस साधना से असीम शांति मिलती है। नई ऊर्जा के साथ आज से फिर जनता की सेवा में लगेंगे।
सबका मंगल हो!
— Arvind Kejriwal (@ArvindKejriwal) December 30, 2023