ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಏ ಗೆ ಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಆದೇಶ ಹೊರಡಿಸಿದ್ದು, ಇದರ ಬೆನ್ನಿಗೆ ಬಿಗಿ ಭದ್ರತೆಯ ಮಧ್ಯೆ ತಿಹಾರ್ ಜೈಲಿಗೆ ಕರೆತರಲಾಗಿದೆ.
ತಿಹಾರ್ ಜೈಲಿಗೆ ರಿಮಾಂಡ್ ಮಾಡಲಾಗಿದ್ದು, ಬಂಧನದ ಸಮಯದಲ್ಲಿ ಓದುವ ಸಾಮಗ್ರಿಗಳಿಗಾಗಿ ವಿಶೇಷ ವಿನಂತಿ ಮಾಡಿದ್ದಾರೆ. ಭಗವದ್ಗೀತೆ, ರಾಮಾಯಣ ಮತ್ತು ನೀರಜಾ ಚೌಧರಿ ಅವರ “ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್ಸ್” ಎಂಬ ಮೂರು ಪುಸ್ತಕಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅನುಮತಿ ಕೋರಿದ್ದಾರೆ.
ಈ ಪುಸ್ತಕಗಳನ್ನು ಜೈಲಿಗೆ ಕೊಂಡೊಯ್ಯಲು ಕೇಜ್ರಿವಾಲ್ ಅವರ ವಕೀಲರು ನ್ಯಾಯಾಲಯದಿಂದ ಅನುಮತಿ ಕೋರಿದ್ದಾರೆ. ಅವರು ಜೈಲಿನಲ್ಲಿದ್ದಾಗ ಅಗತ್ಯ ಔಷಧಿಗಳನ್ನು ಸಹ ಕೇಳಿದ್ದಾರೆ.