ಶಾಸಕರಿಗೆ ಮತ್ತೊಂದು ಪತ್ರ ಬರೆದ ದಿಲ್ಲಿ ಸಿಎಂ: ಕೇಜ್ರಿವಾಲ್‌ಗೆ ಜೈಲಿನಲ್ಲೂ ಜನತೆಯ ಕಾಳಜಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಜೈಲಿನಲ್ಲಿರುವ ಕಾರಣ ಜನತೆ ಯಾವುದೇ ಕಷ್ಟಕ್ಕೆ ಒಳಗಾಗಬಾರದು, ಪ್ರತೀ ಶಾಸಕರೂ ಪ್ರತೀ ದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೊಂದು ಪತ್ರ ಬರೆದು ಎಲ್ಲಾ ಶಾಸಕರುಗಳಿಗೆ ರವಾನಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೇಜ್ರವಾಲ್ ಪತ್ನಿ ಸುನಿತಾ ಕೇಜ್ರಿವಾಲ್, ಮಾಧ್ಯಮ ಪ್ರತಿನಿಧಿಗಳ ಮುಂದೆ ಅದನ್ನು ಬಹಿರಂಗಪಡಿಸಿದರು. ತಮ್ಮ ಗೈರುಹಾಜರಿಯ ಹೊತ್ತಿನಲ್ಲಿ ದಿಲ್ಲಿಯ ಜನ ಯಾವುದೇ ತೊಂದರೆ ಎದುರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕಳ್ಳಬೇಕು ಎಂದು ಅವರು ಪತ್ರದಲ್ಲಿ ಶಾಸಕರಿಗೆ ಸೂಚಿಸಿದ್ದಾರೆ.

ಅಬಕಾರಿ ನೀತಿ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಜ್ರಿವಾಲ್, ಸದ್ಯ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!