July 5, 2026
Sunday, July 5, 2026
spot_img

ದೆಹಲಿ, ಹರಿಯಾಣ ಪೊಲೀಸರ ಜಂಟಿ ಕಾರ್ಯಚರಣೆ: ಬಿಷ್ಣೋಯ್ ಬೆಂಬಲಿಗರ ಹೆಡೆಮುರಿ ಕಟ್ಟಿದ ಭದ್ರತಾ ಪಡೆಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಳೆದ ಜೂನ್ 11 ರಂದು ಹರಿಯಾಣದ ಹನ್ಸಿಯಲ್ಲಿ ಕಪಿಲ್ ಎಂಬ ಜಿಮ್ ಮಾಲೀಕ ತನ್ನ ತರಬೇತುದಾರರೊಂದಿಗೆ ಹೊರಾಂಗಣದಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಭೀಕರವಾಗಿ ಗುಂಡು ಹಾರಿಸಿ ಕೊಂದಿದ್ದರು. ಈ ಇಡೀ ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈ ಕೊಲೆಯ ಹಿಂದೆ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ ಇರುವುದು ಮತ್ತು ಪರವೇಶ್ ಹಾಗೂ ಹಿಮಾಂಶು ಮುಖ್ಯ ಶೂಟರ್‌ಗಳಾಗಿರುವುದು ಪತ್ತೆಯಾಗಿತ್ತು. ತಲೆಮರೆಸಿಕೊಂಡಿದ್ದ ಇವರಿಬ್ಬರ ಮೇಲೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.‌

ಜಂಟಿ ಕಾರ್ಯಾಚರಣೆ ಮತ್ತು ಎನ್‌ಕೌಂಟರ್:

ಶನಿವಾರ ತಡರಾತ್ರಿ ದೆಹಲಿ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಸ್ಪೆಷಲ್ ಸೆಲ್‌ನಿಂದ ಸಿಕ್ಕ ರಹಸ್ಯ ಮಾಹಿತಿ ಆಧರಿಸಿ, ಹರಿಯಾಣ ಪೊಲೀಸ್ ವಿಶೇಷ ಕಾರ್ಯಪಡೆ (STF) ಬಹದ್ದೂರ್‌ಗಢದ ಬಳಿ ಶೂಟರ್‌ಗಳನ್ನು ಸುತ್ತುವರೆಯಿತು. ಈ ವೇಳೆ ಶಂಕಿತರು ಪೊಲೀಸರನ್ನು ನೋಡಿ ಹಠಾತ್ ಗುಂಡಿನ ದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕಾಲಿಗೆ ಬುಲೆಟ್ ತಗುಲಿ ಗಾಯವಾಯಿತು.

ಇದನ್ನೂ ಓದಿ:

ಪೊಲೀಸರು ಆತ್ಮರಕ್ಷಣೆಗಾಗಿ ನಡೆಸಿದ ಮರುದಾಳಿಯಲ್ಲಿ ಇಬ್ಬರೂ ಶೂಟರ್‌ಗಳು ತೀವ್ರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಈ ಎನ್‌ಕೌಂಟರ್ ಮೂಲಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ದೆಹಲಿ-ಹರಿಯಾಣ ನೆಟ್‌ವರ್ಕ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !