ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್, ಎಂಎಲ್ಸಿ ಕವಿತಾ ಮತ್ತು ವೈಸಿಪಿ ಸಂಸದ ಮಾಗುಂಟಾ ಅವರ ಹೆಸರನ್ನು ಇಡಿ ಎರಡನೇ ಚಾರ್ಜ್ ಶೀಟ್ನಲ್ಲಿ ಸೇರಿಸಿದೆ.
ಅಭಿಷೇಕ್ ಬೋಯಿನಪಲ್ಲಿ, ಅಮಿತ್ ಅರೋರಾ, ಸಮೀರ್ ಮಹೇಂದ್ರು, ಶರತ್ ಚಂದ್ರ, ವಿಜಯ್ ನಾಯರ್ ಮತ್ತು ಬಿನೋಯ್ ಬಾಬು ಸೇರಿದಂತೆ ಎಲ್ಲಾ 17 ಆರೋಪಿಗಳ ವಿರುದ್ಧ ಇಡಿ ಆರೋಪ ಹೊರಿಸಿದೆ.
ಆಮ್ ಆದ್ಮಿ ಪಕ್ಷ (AAP) ಮದ್ಯ ಹಗರಣದಿಂದ ಪಡೆದ ಹಣವನ್ನ ಗೋವಾದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಳಸಿದೆ ಎಂದು ಜಾರಿ ನಿರ್ದೇಶನಾಲಯ (ED) ಗುರುವಾರ ಹೇಳಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ, ‘ನಿಧಿಯ ಒಂದು ಭಾಗವನ್ನ ಎಎಪಿ ಚುನಾವಣಾ ಪ್ರಚಾರಕ್ಕಾಗಿ ಬಳಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕಳೆದ ವರ್ಷ ಗೋವಾದಲ್ಲಿ ನಡೆದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಎರಡು ಸ್ಥಾನಗಳನ್ನ ಗೆದ್ದಿತ್ತು.