ದೆಹಲಿ ಮದ್ಯ ನೀತಿ ಹಗರಣ: ಎಎಪಿ ನಾಯಕ ಸಂಜಯ್ ಸಿಂಗ್ ಜಾಮೀನು ಅರ್ಜಿ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮದ್ಯ ನೀತಿ ಹಗರಣ ಸಂಬಂಧ ಎಎಪಿ ನಾಯಕ ಸಂಜಯ್ ಸಿಂಗ್ (sanjay singh) ಅವರ ಜಾಮೀನು ಅರ್ಜಿಯನ್ನು ದೆಹಲಿ ಕೋರ್ಟ್​ ಇಂದು ವಜಾಗೊಳಿಸಿದೆ.

ವಿಶೇಷ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರು ರಾಜ್ಯಸಭಾ ಸಂಸದ ಸಿಂಗ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಸಂಜಯ್​​​​ ಸಿಂಗ್​​​​ ಅವರ ಜಾಮೀನು ಅರ್ಜಿಯನ್ನು ಗುರುವಾರ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತ್ತು.

ಡಿಸೆಂಬರ್​​​ 22ರಂದು ಅರ್ಜಿಯನ್ನು ವಿಚಾರ ಮಾಡುವುದಾಗಿ ಹೇಳಿತ್ತು. ಇನ್ನು ಈ ಪ್ರಕರಣದ ವಿಚಾರಣೆ ವೇಳೆ ಸಂಜಯ್​​​ ಸಿಂಗ್ ಅವರ ವಕೀಲರು ವಾದ ಮಂಡಿಸುವ ವೇಳೆ ಸಂಜಯ್​​​ ಸಿಂಗ್ ಅವರಿಗೆ ಲಂಚ ನೀಡುವ ಕುರಿತು ಆರೋಪಿ ದಿನೇಶ್ ಅರೋರಾ ಮತ್ತು ಇತರ ಸಾಕ್ಷಿಗಳ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ ಎಂದು ಹೇಳಿದರು.

ಇನ್ನು ಸಂಜಯ್​​​ ಸಿಂಗ್​​ ಅವರ ಜಾಮೀನಿ ಅರ್ಜಿಯನ್ನು ಇಡಿ ವಿರೋಧಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿಯಾಗಬಹುದು. ಸಾಕ್ಷಿಗಳನ್ನು ನಾಶ ಮಾಡಬಹುದು ಎಂದು ಇಡಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 4 ರಂದು ರಾಜ್ಯಸಭಾ ಸಂಸದ ಸಂಜಯ್​​ ಸಿಂಗ್ ಅವರನ್ನು ಬಂಧಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!