ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋದಲ್ಲಿ ಪ್ರಯಾಣಿಸುವುದರಿಂದ ಟ್ರಾಫಿಕ್ ಕಿರಿಕಿರಿಯಿಂದ ಪಾರಾಗಬಹುದು. ಹಾಗಾಗಿ ಬೆಲೆ ಜಾಸ್ತಿಯಾದರೂ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಅದರಂತೆ ಮೆಟ್ರೋದಲ್ಲಿ ನಡೆಯುವ ವಿಚಿತ್ರ ವಿಡಿಯೋಗಳೂ ಇತ್ತೀಚೆಗೆ ಸಖತ್ ವೈರಲ್ ಆಗುತ್ತಿವೆ. ಇದಕ್ಕೆ ದೆಹಲಿ ಮೆಟ್ರೋ ಹೊರತಾಗಿಲ್ಲ. ದೆಹಲಿ ಮೆಟ್ರೋದಲ್ಲಿ ರೊಮ್ಯಾನ್ಸ್, ಫನ್ನಿ ಡ್ಯಾನ್ಸ್, ಫೈಟ್ಸ್ ಮುಂತಾದ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇದೀಗ ಇವುಗಳ ಜೊತೆ ಮಹಿಳೆಯರ ಸೀರಿಯಸ್ ಫೈಟ್ ಕೂಡ ವೈರಲ್ ಆಗುತ್ತಿದೆ.
ಕಳೆದ ಕೆಲವು ದಿನಗಳು ಮೆಟ್ರೋದಲ್ಲಿ ರೀಲ್‌ಗಳು, ಹೊಡೆದಾಟ ಮತ್ತು ಪ್ರಣಯಗಳಿಗೆ ಹೆಸರುವಾಸಿಯಾಗಿದೆ. ಅಂದಹಾಗೆ.. ‘ಬಿಗ್ ಬಾಸ್’ಗಿಂತ ಮೆಟ್ರೋ ಎಂಟರ್ಟೈನಿಂಗ್ ಆಗ್ತಿದೆ ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳತೊಡಗಿದ್ದಾರೆ. ಇತ್ತೀಚೆಗಷ್ಟೇ ಸೀಟಿಗಾಗಿ ಕೆಲ ಮಹಿಳೆಯರ ನಡುವೆ ಜಗಳ ನಡೆದಿರುವ ವಿಡಿಯೋ ಸುದ್ದಿಯಾಗುತ್ತಿದೆ.
ಸೀಟಿನ ವಿಚಾರವಾಗಿ ಕೆಲ ಮಹಿಳೆಯರು ಹಾಗೂ ಯುವತಿಯರ ನಡುವೆ ಜಗಳ ನಡೆದಿದೆ. ತಲೆ ಕೂದಲು ಹಿಡಿದು ಎಳೆದಾಡುತ್ತಿರುವುದು ದೃಶ್ಯದಲ್ಲಿ ಕಂಡುಬಂತು. ಈ ವಿಡಿಯೋವನ್ನು ಈಗಾಗಲೇ 90 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
Kalesh b/w Some group of girl and woman inside delhi metro over seat issues pic.twitter.com/jvVS5fq5EX
— Ghar Ke Kalesh (@gharkekalesh) August 22, 2023