August 31, 2026
Monday, August 31, 2026
spot_img

ಚಲಿಸುವ ಬಸ್‌ನಲ್ಲೇ ಹತ್ತನೇ ಕ್ಲಾಸ್‌ ಯುವತಿ ಮೇಲೆ ಸಾಮೂಹಿಕ ಅತ್ಯಾ*ಚಾರ, ಬೆಚ್ಚಿಬಿದ್ದ ದೆಹಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಲಿಸುವ ಬಸ್‌ನೊಳಗೆ 16 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯಲ್ಲಿ ನೋಯ್ಡಾದಲ್ಲಿ ನಡೆದಿದೆ.

ಖಾಸಗಿ ಕಂಪನಿಯಾದ ವಿಶ್ವನಾಥ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರುಯುವಕರನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. 2012ರಲ್ಲಿ ನಡೆದ ನಿರ್ಭಯಾ ಮಾದರಿಯ ಪ್ರಕರಣ ಇದಾಗಿದ್ದು, ಇಡೀ ದೆಹಲಿಯೇ ಬೆಚ್ಚಿಬಿದ್ದಿದೆ. ಆಗಸ್ಟ್‌ ನಾಲ್ಕರಂದು ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೋಯ್ಡಾ ಸೆಕ್ಟರ್‌ 63ಕ್ಕೆ ಹೊರಟಿದ್ದ ಯುವತಿದ್ದ ಬಸ್‌ ಹತ್ತಿದಾಗ ಕೆಲವು ಪ್ರಯಾಣಿಕರಿದ್ದರು. ತದನಂತರ ತಮ್ಮ ಸ್ಟಾಪ್‌ ಬಂದಾಗ ಪ್ರಯಾಣಿಕರು ಕೆಳಕ್ಕೆ ಇಳಿದಿದ್ದು, ಇಡೀ ಬಸ್‌ನಲ್ಲಿ ಯುವತಿ ಹಾಗೂ ಇಬ್ಬರು ಯುವಕರು ಮಾತ್ರ ಇದ್ದರು. ಉತ್ತರ ಪ್ರದೇಶದ ಮೈನ್‌ಪುರಿಯಿಂದ ನೋಯ್ಡಾಗೆ ತೆರಳುತ್ತಿದ್ದ ವೇಳೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ.

ಜೋರು ಮಳೆ ಬೀಳುತ್ತಿತ್ತು..

ಬಸ್‌ ಚಾಲಕ ಕುಲದೀಪ್‌ ಹಾಗೂ ಕಂಡಕ್ಟರ್‌ ಸಂದೀಪ್‌ ಎನ್ನುವವರು ದೆಹಲಿಯ ತಿಮಾರ್‌ಪುರದ ಪಾರ್ಕಿಂಗ್‌ ಸ್ಥಳದಿಂದಲೇ ಪೊಲೀಸರು ಬಂಧಿಸಿದ್ದಾರೆ. ಆ ದಿನ ಜೋರು ಮಳೆ ಬೀಳುತ್ತಿದ್ದ ಸಮಯ ಬಹಳ ಹೊತ್ತಿನಿಂದ ಯುವತಿ ಬಸ್‌ಗಾಗಿ ಕಾಯುತ್ತಿದ್ದಳು. ಸುಮಾರು 35ಕಿ.ಮೀ ದೂರದಲ್ಲಿರುವ ತನ್ನ ಸೋದರಸಂಬಂಧಿಯ ಮನೆಗೆ ಆಕೆ ಹೋಗಬೇಕಿತ್ತು. ಈ ವೇಳೆ ಸ್ಲೀಪರ್‌ ಬಸ್‌ ಮೂಲಕ ಹಾದುಹೋಗುತ್ತಿದ್ದ ಕಾಮುಕರು ಆಕೆಯನ್ನು ನೋಡಿ ಗಾಡಿ ನಿಲ್ಲಿಸಿದ್ದಾರೆ. ನಾವೂ ಸೆಕ್ಟರ್‌ 63ರಕಡೆಗೆ ಹೋಗ್ತಿದ್ದೇವೆ ಎಂದು ಹೇಳಿದ್ದಾರೆ.

ಬಾಯಿಬಿಟ್ಟರೆ ಕೊಲೆ ಮಾಡ್ತೀವಿ

ಆಕೆ ಬಸ್‌ ಹತ್ತಿದ್ದಾಳೆ. ವಾಹನ ಚಲಿಸಲು ಪ್ರಾರಂಭಿಸಿದ ಕೂಡಲೇ ಕಂಡಕ್ಟರ್‌ ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತದನಂತರ ಬಸ್‌ ಚಾಲಕ ಬಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯ ಎಲ್ಲಾದರೂ ಬಾಯಿಬಿಟ್ಟರೆ ಕೊಂದುಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅತ್ಯಾಚಾರ ಎಸಗಿದ ನಂತರ ಆಕೆಯನ್ನು ಕಶ್ಮೀರ್‌ ಗೇಟ್‌ ಬಳಿಯ ರಿಂಗ್‌ ರೋಡ್‌ನಲ್ಲಿ ಇಳಿಸಿ ಹೋಗಿದ್ದಾರೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಸ್ಲೀಪರ್‌ ಬಸ್‌ನಲ್ಲಿ ಕರ್ಟನ್‌ಗಳಿತ್ತು. ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದರು ಎಂದು ಹೇಳಿದ್ದಾಳೆ. ಇದಕ್ಕೆ ಸಾಕ್ಷ್ಯವೆಂಬಂತೆ ಬಸ್‌ನ ಸೀಟ್‌ನಲ್ಲಿ ಆಕೆಯ ತಲೆಕೂದಲು ಸಿಕ್ಕಿದೆ. ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯ ಬಸ್‌ ಪೊಲೀಸರ ವಶದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !