ದೆಹಲಿ ತಾಪಮಾನ 4.5°C ಗೆ ಕುಸಿತ: ಹೊರಾಂಗಣ ಚಟುವಟಿಕೆ ಕಡಿಮೆ ಮಾಡಿ ಎಂದ IMD

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ 4.5°C ಗೆ ಕುಸಿದಿದ್ದು, ಶೀತಗಾಳಿ ವ್ಯಾಪಿಸಿದೆ ಎಂದು ಹವಮಾನ ಇಲಾಖೆ ಹೇಳಿದೆ. ನಗರದ ಕೆಲವು ಭಾಗಗಳಲ್ಲಿ ಶೀತದ ಅಲೆ ತೀವ್ರಗೊಂಡಿದ್ದು, ಪೂಸಾ ಪ್ರದೇಶದಲ್ಲಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಮತ್ತು ಅಯಾನಗರದಲ್ಲಿ 4.1 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಬೆಳಗ್ಗೆ 9 ಗಂಟೆಗೆ 351 ರ ವಾಯು ಗುಣಮಟ್ಟ ಸೂಚ್ಯಂಕ  ದಾಖಲಾಗುವುದರೊಂದಿಗೆ ದೆಹಲಿಯ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ವಿಭಾಗದಲ್ಲಿ ಉಳಿದಿದೆ. ಹೆಚ್ಚು ಶೀತ ಅಲೆಗಳ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ದೆಹಲಿ ನಿವಾಸಿಗಳಿಗೆ ಐಎಮ್‌ಡಿ  ಹೊರಾಂಗಣ ಚಟುವಟಿಕೆಗಳನ್ನು ಮಿತಿಗೊಳಿಸಲು ಮುನ್ನೆಚ್ಚರಿಕೆ ಕ್ರಮಗಳ ಸಲಹೆಯಲ್ಲಿ ತಿಳಿಸಲಾಗಿದೆ. ಕಳಪೆ ಗಾಳಿಯ ಗುಣಮಟ್ಟದಿಂದ ಉಲ್ಬಣಗೊಂಡ ಉಸಿರಾಟದ ಸಮಸ್ಯೆಗಳಿರುವವರಿಗೆ ವಿಶೇಷವಾಗಿ ಇದು ಅನ್ವಯಿಸುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!