Friday, October 24, 2025

ದೆಹಲಿಯಲ್ಲಿ ಪ್ರಾಣವಾಯು ಕಂಟಕ: ಅತ್ಯಂತ ಕಳಪೆಯಾದ ವಾಯು ಗುಣಮಟ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀಪಾವಳಿ ಹಬ್ಬದ ವೇಳೆ ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ಸ್ಥಿತಿಗೆ ತಲುಪಿದೆ. ಇಂದು ಬೆಳಗ್ಗೆ 5:30ಕ್ಕೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 346 ದಾಖಲಾಗಿದೆ.

ಹೆಚ್ಚಿನ ಪ್ರದೇಶಗಳು ಇಂದು ರೆಡ್‌ಝೋನ್‌ನಲ್ಲಿದೆ. ಸುಪ್ರೀಂ ಕೋರ್ಟ್ ನಿಷೇಧವನ್ನು ತೆರವುಗೊಳಿಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಹಸಿರು ಪಟಾಕಿಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗಿತ್ತು. ಆದರೂ, ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ವಿಭಾಗಕ್ಕೆ ಕುಸಿದಿದೆ.

ನಿನ್ನೆ ರಾತ್ರಿ 10 ಗಂಟೆಗೆ, 38 ಮಾನಿಟರಿಂಗ್ ಕೇಂದ್ರಗಳ ಪೈಕಿ 36 ಕೇಂದ್ರಗಳಲ್ಲಿ ಮಾಲಿನ್ಯ ಮಟ್ಟವು ಕೆಂಪು ವಲಯದಲ್ಲಿ ದಾಖಲಾಗಿದೆ. ಇದು ದೆಹಲಿಯಾದ್ಯಂತ ಅತ್ಯಂತ ಕಳಪೆಯಿಂದ ಭಯಾನಕ ವಾಯು ಗುಣಮಟ್ಟವನ್ನು ಸೂಚಿಸುತ್ತದೆ.

error: Content is protected !!