Friday, January 9, 2026

ಬಳ್ಳಾರಿ ಬ್ಯಾನರ್‌ ಗಲಾಟೆಯಲ್ಲಿ ಕೈ ಕಾರ್ಯಕರ್ತನ ಉದ್ದೇಶಪೂರ್ವಕ ಹತ್ಯೆ: ಗಾಲಿ ಜನಾರ್ಧನ್ ರೆಡ್ಡಿ

ಹೊಸದಿಗಂತ ವರದಿ ಬಳ್ಳಾರಿ:

ಬ್ಯಾನರ್ ಗಲಾಟೆಯಲ್ಲಿ ಕೈ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಅವರನ್ನು ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಲಾಗಿದೆ, ರೆಡ್ಡಿ ಜೊತೆಗೆ ನಗರ ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ ಶೇಖರ್ ಅವರನ್ನು ಹತ್ಯೆ ಮಾಡಿ ಜನಾರ್ಧನ್ ರೆಡ್ಡಿ ತಲೆಗೆ ಕಟ್ಟುವ ಪ್ರಯತ್ನ ನಡೆದಿತ್ತು. ಆದರೆ, ಶೇಖರ್ ಅದೃಷ್ಟವಶಾತ್ ಪರಾದ. ಇದರ ರೂವಾರಿ ನಗರ ಶಾಸಕ ಭರತ್ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಅವರು ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಜನಾರ್ಧನ್ ರೆಡ್ಡಿ ಅವರ ನಿವಾಸದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಘಟನೆಯ ವಿಡಿಯೋ ರಿಲೀಸ್ ಮಾತನಾಡಿ, ಗಾಂಜಾ ಸೇವನೆ ಮಾಡಿದ್ರೂ, ಮಧ್ಯ ಸೇವಿಸಿದ್ರೋ ಗೊತ್ತಿಲ್ಲ, ಶಾಸಕ ನಾರಾ ಭರತ್ ರೆಡ್ಡಿ ನನ್ನ ನಿವಾಸದ ಎದುರು ನಡೆದ ಗಲಾಟೆಯಲ್ಲಿ ನಾನು ಒಂದು ಕರೆ ಕೊಟ್ರೆ ಇಡಿ ಬಳ್ಳಾರಿ ಸುತ್ತು ಹೋಗುತ್ತಿತ್ತು, ಮನಸ್ಸು ಮಾಡಿದ್ರೆ ಜನಾರ್ಧನ್ ರೆಡ್ಡಿ ಮನೆ ಸುಟ್ಟು ಹೋಗುತ್ತಿದ್ದೆ ಎಂದು ಹೇಳಿಕೆ ನೀಡಿದ್ದು, ಘಟನೆಯ ರೂವಾರಿ ಭರತ್ ರೆಡ್ಡಿ ಎಂತಹ ವ್ಯಕ್ತಿ ಎನ್ನುವುದು ಅವರ ಹೇಳಿಕೆ ಸಾಕ್ಷಿಕರಿಸುತ್ತಿದೆ. ಶಾಸಕ ಭರತ್ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ನನ್ನುನ್ನು ಹತ್ಯೆ ಮಾಡಲು ವ್ಯವಸ್ಥಿತ ಸಂಚು ರೂಪಿಸಿದ್ದರು.

ಗಲಾಟೆ ವೇಳೆ ಸತೀಶ್ ರೆಡ್ಡಿ ಗನ್ ಮ್ಯಾನ್, ಪೋಲೀಸ್ ರು ನಡೆಸಿದ ಲಾಠಿ ಚಾರ್ಜ ವೇಳೆ ನೇರವಾಗಿ ರಾಜಶೇಖರ್ ರೆಡ್ಡಿ ಅವರಿಗೆ ಗುಂಡು ಹಾರಿಸಿ, ಮತ್ತೆ ಗಾಳಿಯಲ್ಲಿ ಇನ್ನೊಂದು ಗುಂಡು ಹಾರಿಸಿದ, ಘಟನೆ ವೇಳೆ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಸತೀಶ್ ರೆಡ್ಡಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬೆಂಗಳೂರಿಗೆ ಕಳುಹಿಸಲಾಯಿತು. ಈ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ ಅವರ ಹತ್ಯೆ ಮಾಡುವ ಸಂಚು ರೂಪಿಸಿದ್ದರು, ಅದೃಷ್ಟಕ್ಕೆ ಅದು ವಿಫಲವಾಯಿತು. ಘಟನೆಯನ್ನು ಜನಾರ್ಧನ್ ರೆಡ್ಡಿ ಹಾಗೂ ಶ್ರೀರಾಮುಲು ಅವರ ಮೇಲೆ ಹೊರಿಸುವ ಸಂಚು ರೂಪಿಸಿದ್ದ ಭರತ್ ರೆಡ್ಡಿ ಅವರ ಉದ್ದೇಶ ಈಡೇರಲಿಲ್ಲ, ಅಮಾಯಕ ವ್ಯಕ್ತಿ ಬಲಿಯಾದ, ಕೂಡಲೇ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಆಪ್ತ ಸತೀಶ್ ರೆಡ್ಡಿ ಹಾಗೂ ಸಹಚರರನ್ನು ಬಂಧಿಸಬೇಕು.

ಅರಸು ಅವರ ದಾಖಲೆ ಮುರಿದ ಸಿ.ಎಂ.ಸಿದ್ದರಾಮಯ್ಯ ಅವರು ಕೂಡಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಶಾಸಕರನ್ನು ಬಂಧಿಸಬೇಕು, ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಒತ್ತಾಯಿಸಿದರು. ರೆಡ್ಡಿ ಹಾಗೂ ಲಿಂಗಾಯತ ಸಮಾಜದವರು ಬಿಜೆಪಿ ಪರವಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಘಟನೆಯಲ್ಲಿ ಎರಡು ಸಮುದಾಯದವರನ್ನು ಹತ್ಯೆ ಮಾಡಿ, ಜನಾರ್ಧನ್ ರೆಡ್ಡಿ ಅವರ ತಲೆಗೆ ಕಟ್ಟಬೇಕು ಎನ್ನುವ ಭರತ್ ರೆಡ್ಡಿ ಗುರಿಯಾಗಿತ್ತು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀರಾಮುಲು, ಮಾಜಿ ಸಂಸದ ಸಣ್ಣ ಫಕೀರಪ್ಪ, ಮಂಡಲ ಅಧ್ಯಕ್ಷ ವೆಂಕಟರಮಣ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಇತರರಿದ್ದರು.

error: Content is protected !!