ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮುಕ ಡೆಲಿವರಿ ಬಾಯ್ ಒಬ್ಬ ಆರ್ಡರ್ ಡೆಲಿವರಿ ಮಾಡಿದ ಮಹಿಳೆಯರ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾನೆ, ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ರಮೇಶ್ ರೆಡ್ಡಿ ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ. ರಮೇಶ್ ರೆಡ್ಡಿ ಆಗಾಗ ಕೆಲ ಕೋರಿಯರ್ ಕಂಪನಿಗಳಲ್ಲಿ, ಫುಡ್ ಡೆಲಿವರಿಗಾಗಿ ಕೆಲಸಕ್ಕೆ ಹೋಗುತ್ತಿದ್ದನು. ಕೋರಿಯರ್ ಕಂಪನಿಗಳು ಕೂಡಾ ತಮ್ಮ ಸಿಬ್ಬಂದಿ ರಜೆ ಇದ್ದಾಗ, ಈತನನ್ನು ಕೋರಿಯರ್ ಡೆಲಿವರಿ ಮಾಡಲು ಕಳುಹಿಸುತ್ತಿದ್ದರಂತೆ. ಆದರೆ, ಈತ ಕಂಪನಿಗಳು ಹೇಳಿದಷ್ಟು ಕೆಲಸ ಮಾಡದೆ ನೀಚ ಕೃತ್ಯ ಎಸಗಿದ್ದಾನೆ.
ಆರೋಪಿ ರಮೇಶ್ ರೆಡ್ಡಿ ಮಹಿಳಾ ಗ್ರಾಹಕರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಂಡು, ಬಳಿಕ ಅವರಿಗೆ ಹಾಯ್ ಬೇಬಿ, ಐ ವಾಂಟ್ ಟು ಮೀಟ್ ಯು, ಐ ಲವ್ ಯು ಸೇರಿದಂತೆ ಅನೇಕ ಅಶ್ಲೀಲ ಮೆಸೆಜ್ಗಳನ್ನು ಕಳುಹಿಸುತ್ತಿದ್ದನಂತೆ. ಆರೋಪಿ ರಮೇಶ್ ರೆಡ್ಡಿ ಕಾಟವನ್ನು ತಾಳಲಾರದೆ, ಅನೇಕರು ಈತನ ನಂಬರ್ ಬ್ಲಾಕ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.