ಚಲಿಸುತ್ತಿದ್ದ ಬಸ್‌ನಲ್ಲೇ ಡೆಲಿವರಿ: ಕಿಟಕಿಯಿಂದ ಮಗುವನ್ನು ಎಸೆದುಬಿಟ್ಟ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಲಿಸುತ್ತಿದ್ದ ಬಸ್ಸ್‌ನಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಬಳಿಕ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿಯ ಪತ್ರಿ-ಸೇಲು ರಸ್ತೆಯಲ್ಲಿ ನಡೆದಿದೆ.

ಪಾಪಿ ತಾಯಿಯನ್ನು ಋತಿಕಾ ಧೇರೆ (19) ಎಂದು ಗುರುತಿಸಲಾಗಿದ್ದು, ಆಕೆ ಪತಿ ಎಂದು ಹೇಳಿಕೊಂಡಿದ್ದವನನ್ನು ಅಲ್ತಾಫ್ ಶೇಖ್ ಎನ್ನಲಾಗಿದೆ. ಚಲಿಸುತ್ತಿದ್ದ ಬಸ್ಸ್‌ನಲ್ಲಿಯೇ ಗಂಡು ಮಗುವಿಗೆ ಮಹಿಳೆ ಜನ್ಮನೀಡಿದಳು. ನಂತರ ಆಕೆ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕಿಟಕಿಯಿಂದ ಎಸೆದಿದ್ದಾಳೆ.

ವಾಹನ ಚಲಾಯಿಸುತ್ತಿರುವಾಗ ಚಾಲಕನಿಗೆ ಕಿಟಿಕಿಯಿಂದ ಏನ್ನನ್ನೋ ಹೊರಗೆ ಎಸೆದರು ಎಂದು ಗಮನಕ್ಕೆ ಬಂದಿದೆ. ಚಾಲಕ ಈ ಬಗ್ಗೆ ವಿಚಾರಿಸಿದಾಗ ಆಕೆಯ ಪತಿ, ಬಸ್ಸ್‌ನಲ್ಲಿ ಪ್ರಯಾಣಿಸುತ್ತಿರುವ ಕಾರಣ ನನ್ನ ಹೆಂಡತಿ ವಾಂತಿ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಸ್ಸ್‌ನಿಂದ ಏನೋ ಹೊರಗೆ ಬಿದ್ದದ್ದನ್ನು ಗಮನಿಸಿ ಹೋಗಿ ನೋಡಿದರೆ ಅಲ್ಲಿ ಮಗು ಪತ್ತೆಯಾಗಿದೆ.

ಕೂಡಲೇ ವ್ಯಕ್ತಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳೀಯ ಪೊಲೀಸರ ತಂಡವೊಂದು ಬಸ್ ಅನ್ನು ತಡೆದರು. ವಾಹನವನ್ನು ಪರಿಶೀಲಿಸಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮಹಿಳೆ ಹಾಗೂ ಶೇಖ್‌ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ನಮಗೆ ಮಗುವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಎಸೆದಿದ್ದೇವೆ. ರಸ್ತೆಗೆ ಎಸೆದ ಬಳಿಕ ಅದು ಸಾವನ್ನಪ್ಪಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!