ಎಚ್‌ಎಎಲ್‌ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್​ಗೆ ಡಿಮ್ಯಾಂಡ್: ಮುಂದಿನ ‌6 ತಿಂಗಳಲ್ಲಿ 2.5 ಲಕ್ಷ ಕೋಟಿ ವಹಿವಾಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲಘು ಹಾಗೂ ಹಗುರ ಹೆಲಿಕಾಪ್ಟರ್​ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹಿಂದೂಸ್ತಾನ್​​ ಏರೋನಾಟಿಕಲ್​ ಲಿಮಿಟೆಡ್​ಗೆ (ಹೆಚ್​​​ಎಎಲ್​​) ದೇಶ ಹಾಗೂ ವಿದೇಶಗಳಿಂದ ಹೆಲಿಕಾಪ್ಟರ್​ಗಳ ಉತ್ಪಾದನೆಗೆ ಬೇಡಿಕೆ ಬರುತ್ತಿದೆ.

ಇದರ ಹಣಕಾಸು ವಹಿವಾಟು ಮುಂದಿನ ಆರು ತಿಂಗಳಲ್ಲಿ ಸುಮಾರು 2.5 ಲಕ್ಷ ಕೋಟಿಗೆ ಹೆಚ್ಚಳವಾಗಲಿದೆ ಎಂದು ಸಂಸ್ಥೆಯ ಸಿಎಂಡಿ ಡಾ.ಡಿ.ಕೆ.ಸುನಿಲ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಪ್ರಸ್ತುತ ಆರ್ಥಿಕ ವರ್ಷದ 9 ತಿಂಗಳಲ್ಲಿ 55 ಸಾವಿರ ಕೋಟಿ ಮೊತ್ತದ ಹೆಲಿಕಾಪ್ಟರ್​ಗಳನ್ನು ತಯಾರಿಸಿಕೊಡಲು ಆರ್ಡರ್ ಬಂದಿವೆ. ಮುಂದಿನ ಐದಾರು ತಿಂಗಳಲ್ಲಿ 1.2 ಲಕ್ಷ ಕೋಟಿಗೆ ದಾಟಲಿದ್ದು, ಒಟ್ಟಾರೆ 2.5 ಲಕ್ಷ ಕೋಟಿ ರೂಪಾಯಿ ವಹಿವಾಟು ಆಗಲಿದೆ” ಎಂದು ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಎಂಡಿ ಮಾಹಿತಿ ನೀಡಿದ್ದಾರೆ.

ಸದ್ಯ ತೇಜಸ್​​ ಹಾಗೂ ಪ್ರಚಂಡ್​​ ಲಘು ಯುದ್ಧ ಹೆಲಿಕಾಫ್ಟರ್​ಗಳ (ಎಲ್​ಸಿಎ) ತಯಾರಿಕೆಗೆ ಬೇಡಿಕೆ ಸೃಷ್ಟಿಯಾಗಿದೆ. ಅತ್ಯಾಧುನಿಕ ಹಾಗೂ ಸುಧಾರಿತ 97 ತೇಜಸ್​​ ಹಾಗೂ 156 ಎಲ್​​ಸಿಎ ಹೆಲಿಕಾಪ್ಟರ್​ಗಳನ್ನು ಉತ್ಪಾದಿಸಲಾಗುತ್ತಿದ್ದು, ಐದಾರು ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಗಿಯಲಿದೆ. ಬೇಡಿಕೆಗಳಿಗೆ ತಕ್ಕಂತೆ ತ್ವರಿತಗತಿಯಲ್ಲಿ ಹೆಲಿಕಾಪ್ಟರ್​ಗಳನ್ನು ಬೆಂಗಳೂರು, ಮಹಾರಾಷ್ಟ್ರದ ನಾಸಿಕ್​​ ಸೇರಿದಂತೆ ಮೂರು ಕಡೆಯ ನಿರ್ಮಾಣ ಘಟಕಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!