ಹೊಸ ದಿಗಂತ ವರದಿ, ಸೋಮವಾರಪೇಟೆ:
ಗೋವಿನ ಕೆಚ್ಚಲು ಕಡಿದವನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅದು ಇಂತಹ ಕಟುಕರಿಗೆ ಪಾಠವಾಗಬೇಕೆಂದು ವೀರಶೈವ ಲಿಂಗಾಯತ ಸಂಘಟನಾವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಹಸುವಿನ ಕೆಚ್ಚಲು ಕತ್ತರಿಸಿವುದು ಹೇಯಕೃತ್ಯ ಇದು ಅವನ ಕ್ರೌರ್ಯದ ಮುಖವನ್ನು ತೋರಿಸಿದೆ ಎಂದಿದ್ದಾರೆ.
ಈ ದೇಶದಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ, ಪೂಜ್ಯ ಭಾವನೆಯಿಂದ ನೋಡುತ್ತೇವೆ ಹಾಗೂ ಪೂಜಿಸುತ್ತೇವೆ.ಗೋವುಗಳು ಕೃಷಿಕ್ಷೇತ್ರದಲ್ಲಿ ರೈತರ ಬೆನ್ನೆಲುಬಾಗಿವೆ ಅಂತ ಗೋವಿನಮೇಲೆ ಇಂತಹ ಪೈಶಾಚಿಕ ಕೃತ್ಯ ಸಹಿಸಲು ಸಾಧ್ಯವಿಲ್ಲಾ ಇಂಥ ಕಟುಕನ ಮೇಲೆ ನಿರ್ದಾಕ್ಷಿಣ್ಯ ಹಾಗು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಸುವಿನ ಮಾಲೀಕರಿಗೆ ಹೊಸ ಹಸುಗಳನ್ನು ಕೊಡಿಸಿದಾಕ್ಷಣ ಕೆಚ್ಚಲು ಕಳೆದುಕೊಂಡ ಹಸುವಿನ ನೋವು ಮರೆಯಾಗುವುದಿಲ್ಲಾ. ಬದಲಿಗೆ ಇಂಥ ಕರಾಳಮುಖದ ಆರೋಪಿಗೆ ಸರಿಯಾದ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕಾಗಿರುವುದು ಜನಪ್ರತಿನಿಧಿಗಳ ಕಾರ್ಯವಾಗಲಿ ಎಂದು ಒತ್ತಾಯಿಸಿದ್ದಾರೆ.