ಕಾಮಗಾರಿ ಅನುಮೋದನೆಗಾಗಿ ಲಂಚ ಬೇಡಿಕೆ: ಲೋಕಾಯುಕ್ತರ ಬಲೆಗೆ ಬಿದ್ದ ಇಂಜನೀಯರ್

ಹೊಸದಿಗಂತ ವರದಿ,ಹಾವೇರಿ:

ಕಾಮಗಾರಿ ಅನುಮೋದನೆಗಾಗಿ ಲಂಚ ಬೇಡಿಕೆ ಇಟ್ಟು ಹಣ ಪಡೆಯುವಾಗ ಪಿಆರ್ ಇ ವಿಭಾಗದ ಇಬ್ಬರನ್ನು ಬಲೆಗೆ ಬೀಳಿಸುವಲ್ಲಿ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾವೇರಿ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಡಿ.ಎಲ್. ಕಲ್ಲೋಳಿಕರ, ಹಾಗೂ ತಾಲೂಕ ಯೋಜನಾಧಿಕಾರಿ ಮಲ್ಲಿಕಾರ್ಜುನ ಬಿಕ್ಕಣ್ಣನವರ ಲೋಕಾ ಲೋಕಾ ಬಲೆಗೆ ಬಿದ್ದವರು.

ರಾಣೆಬೆನ್ನೂರ ತಾಲೂಕಿನ ಇಟಗಿ ಗ್ರಾಮದ ೪ನೇ ದರ್ಜೆ ಗುತ್ತಿಗೆದಾರ ಹಾಲೇಶ ಕುರುವತ್ತೇರ ಚರಂಡಿ ನಿರ್ಮಾಣ ಗುತ್ತಿಗೆ ಪಡೆಯಲು ಅನುಮತಿಗಾಗಿ ಈ ಇಬ್ಬರ ಬಳಿ ತೆರಳಿದ್ದು ಅನುಮೋದನೆಗಾಗಿ ಶೇ.೨ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದು ಧೆ ಮೊತ್ತ ರೂ.೮೦೦೦ ಪೈಕಿ ರೂ.೪೦೦೦ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ.

ಲೋಕಾ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆದಿದ್ದು ತನಿಖೆ ಮುಂದುವರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!