ಸಾಮಾನ್ಯವಾಗಿ ವಯಸ್ಸಾದ ನಂತರ ಮರೆವಿನ ಕಾಯಿಲೆ ಆರಂಭವಾಗುತ್ತದೆ. ಇಟ್ಟ ವಸ್ತುವನ್ನು ಮರೆಯುವುದು, ಫೋನ್ ನಂಬರ್ ಮರೆಯುವುದು ಹೀಗೆ ಸಣ್ಣದರಿಂದ ಶುರುವಾಗಿ ನಂತರ ತಾನು ಯಾರು ಎಂಬುದನ್ನೇ ಜನರು ಮರೆತುಹೋಗುತ್ತಾರೆ. ಮರೆವಿನ ಕಾಯಿಲೆಯ ಮೊದಲ ಲಕ್ಷಣಗಳಿವು..
- ಯಾವುದೇ ವಿಷಯದ ಮೇಲೆ ಗಮನ ಇರೋದಿಲ್ಲ.ಏಕಾಗ್ರತೆ ಕೊರತೆ
- ವಸ್ತುಗಳನ್ನು ಇಟ್ಟು ಮರೆತುಬಿಡುವುದು
- ದಿನವೂ ಮಾಡೋ ಮಾಮೂಲಿ ಕೆಲಸಗಳೇ ಕಷ್ಟ ಎನಿಸುವುದು
- ಮಾತನಾಡುವಾಗ ಮುಂದಿನ ಪದ ಯಾವುದು ಎಂದು ಮರೆತುಹೋಗುವುದು, ಸರಿಯಾದ ಪದ ಬಳಸಲು ಆಗದೇ ಇರುವುದು
- ಮೂಡ್‌ನಲ್ಲಿ ದಿಢೀರ್ ಬದಲಾವಣೆ
- ಸಮಯ ಹಾಗೂ ಸ್ಥಳದ ಬಗ್ಗೆ ಸದಾ ಗೊಂದಲ
- ಆಲೋಚನೆಗಳು ನಿಮಿಷಕ್ಕೊಮ್ಮೆ ಬದಲಾಗೋದು
- ವಸ್ತುಗಳನ್ನು ಒಂದು ಜಾಗದಲ್ಲಿ ಇಟ್ಟು ಮರೆತು, ಇನ್ಯಾವುದೋ ಜಾಗದಲ್ಲಿ ಹೆಚ್ಚು ಹುಡುಕುವುದು
60ರ ನಂತರ ಮರೆವಿನ ಕಾಯಿಲೆ ಬಾರದಂತೆ ತಡೆಯಲು ಹೀಗೆ ಮಾಡಿ..
- ದೈಹಿಕವಾಗಿ ಸದಾ ಆಕ್ಟೀವ್ ಆಗಿರಿ
- ಆರೋಗ್ಯಕರ ಆಹಾರ ಸೇವಿಸಿ
- ಧೂಮಪಾನ ಬಿಟ್ಟುಬಿಡಿ
- ಮದ್ಯಪಾನಕ್ಕೆ ನೋ ಹೇಳಿ
- ಸಾಮಾಜಿಕವಾಗಿ ಮಾನಸಿಕವಾಗಿ ಜನರ ಜೊತೆ ಬೆರೆತು ಎಂಜಾಯ್ ಮಾಡಿ
- ನಿಮ್ಮ ಆರೋಗ್ಯದ ಕಡೆ ಗಮನ ಇರಲಿ
- ಒತ್ತಡದ ಜೀವನಶೈಲಿ ಬಿಟ್ಟುಬಿಡಿ
- ಆರೋಗ್ಯಕರ ನಿದ್ದೆಯ ರೊಟೀನ್ ನಿಮ್ಮದಾಗಲಿ
- ವಿಟಮಿನ್ ಹಾಗೂ ನ್ಯೂಟ್ರಿಯಂಟ್‌ಗಳ ಸೇವನೆ ಮಾಡಿ
- ಆಕ್ಯುಪಂಚರ್ ಬಳಸಿ
- ಹೃದಯ ಆರೋಗ್ಯವಾಗಿರಲಿ