ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ತೆಗೆದ ಬಳಿಕ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಕ್ಕಿದೆ: ಅಮಿತ್​ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್​ 370 ಅನ್ನು ತೆಗೆದ ಬಳಿಕ ಪ್ರತಿಯೊಬ್ಬರು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.
ಶನಿವಾರಜಮ್ಮುವಿನ ಮೌಲಾನಾ ಆಜಾದ್​ ಸ್ಟೇಡಿಯಂನಲ್ಲಿ 83ನೇ ಸಿಆರ್​ಪಿಎಫ್​ ರೈಸಿಂಗ್​ ದಿನದ ಪರೇಡ್​ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಶಾ, 2014ರ ಮುನ್ನ ಜಮ್ಮು ತನ್ನದೇ ಆದ ಧ್ವಜ ಮತ್ತು ಪ್ರತ್ಯೇಕ ಸಂವಿಧಾನವನ್ನು ಹೊಂದಿತ್ತು. ಆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹೊಸತನದಿಂದ ಕೂಡಿದ ಬದಲಾವಣೆಗಳಾಗಿವೆ ಆಗಿವೆ. ಈ ಮೂಲಕ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಸಾಕಾರಗೊಂಡಿದೆ.
ಪ್ರತಿ ಗ್ರಾಮಮಟ್ಟದಲ್ಲೂ ಅಭಿವೃದ್ಧಿಗೆ ಸಹಕಾರಿಯಾಗುವ ವಾತಾವರಣವನ್ನು ಕಲ್ಪಿಸಿದ್ದಾರೆ.
ಆರ್ಟಿಕಲ್​ 370ರ ನಿರ್ಮೂಲನೆಯ ನಂತರ ಮಹಿಳೆಯರು ಹಾಗೂ ಬುಡಕಟ್ಟು ಜನಾಂಗದವರಿಗೆ ಸರಿಯಾದ ಸ್ಥಾನ ಸಿಕ್ಕಿದೆ. ಇಲ್ಲಿ 33,000 ಕೋಟಿ ರೂ. ಹೂಡಿಕೆಯ ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಲೆಫ್ಟಿನೆಂಟ್​ ಜನರಲ್​ ಮನೋಜ್​ ಸಿನ್ಹಾ ಅವರನ್ನು ಅಭಿನಂದಿಸುತ್ತೇನೆ ಎಂದರು.
ನಮ್ಮ ದೇಶ ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನವನ್ನು ಹೊಂದಿರಬೇಕು ಎನ್ನುವುದಕ್ಕೆ ಶ್ಯಾಮ ಪ್ರಸಾದ್​ ಮುಖರ್ಜಿ ಸರ್ವ ತ್ಯಾಗಗಳನ್ನೂ ಮಾಡಿದ್ದರು.
ಇದೇ ವೇಳೆ ದೇಶದಲ್ಲಿ ಶಾಂತಿ ಮತ್ತು ಏಕತೆಗಾಗಿ ಹೋರಾಡಿ ಪ್ರಶಸ್ತಿ ಗಳಿಸಿದ ಸಿಆರ್​ಪಿಎಫ್​ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.
ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸಲು ಸುಸಜ್ಜಿತ ಸಿಆರ್​ಪಿಎಫ್​ ಪಡೆ ಇದೆ ಎಂಬುದನ್ನು ತಿಳಿದಿರುವ ಜನ ನೆಮ್ಮದಿಯಿಂದಿದ್ದಾರೆ. 1959 ಅಕ್ಷೋಬರ್​ 21ರಂದು ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಕೆಲವು ಸಿಆರ್​ಪಿಎಫ್​ ಯೋಧರು ವೀರಾವೇಶದಿಂದ ಹೋರಾಡಿ ಆಕ್ರಮಣವನ್ನು ತಡೆದಿದ್ದರು.ಹಾಗಾಗಿ, ಅಕ್ಟೋಬರ್​ 21ರಂದು ಪ್ರತಿ ರಾಜ್ಯದಲ್ಲೂ ಪೊಲೀಸ್​ ಸ್ಮರನಾರ್ಥ ದಿನವಾಗಿ ಆಚರಿಸಲಾಗುತ್ತದೆ. ದೇಶದಲ್ಲಿ ಎಲ್ಲೇ ಚುನಾವಣೆಗಳಾದರೂ ಅದು ಶಾಂತಿಯುತವಾಗಿ ನಡೆಯುವಲ್ಲಿ ಸಿಆರ್​ಪಿಎಫ್​ ಯೋಧರ ಕೊಡುಗೆ ಇದೆ.ದೇಶದ ಜನ ನೆಮ್ಮದಿಯಿಂದ ಜೀವಿಸಲು ಕಾರಣರಾಗಿರುವ ಯೋಧರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!