ಪ್ರತಿ ವರ್ಷ ಮೇ 16 ರಂದು ವಿಶ್ವ ಡೆಂಗ್ಯೂ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನವು ಡೆಂಗ್ಯೂ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಈ ಮಾರಕ ಕಾಯಿಲೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಹಾಯಕವಾಗಿದೆ. ಡೆಂಗ್ಯೂ ಈಡಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ.
ಮನೆಯೊಳಗೆ ಹೇಗೆ?
ಮನೆಯ ಒಳಾಂಗಣದಲ್ಲಿ ಅಥವಾ ತೋಟದಲ್ಲಿ ಇಡಲಾಗಿರುವ ಹೂವಿನ ಕುಂಡಗಳ ತಗ್ಗಿನಲ್ಲಿ ನೀರು ಸಂಗ್ರಹವಾದರೆ, ಈಡಿಸ್ ಸೊಳ್ಳೆಗಳು ತಮ್ಮ ಮೊಟ್ಟೆಗಳನ್ನು ಇಡಲು ಇದು ಒಂದು ಪರಿಪೂರ್ಣ ಸ್ಥಳವಾಗುತ್ತದೆ, ಜೊತೆಗೆ ಫ್ರಿಡ್ಜ್‌ನ ಹಿಂಬದಿಯಲ್ಲಿ ಶೇಖರವಾಗುವ ನೀರು, ಏರ್ ಕಂಡಿಷನರ್ನಿಂದ ಹೊರಬರುವ ನೀರಿನಿಂದ ಕೂಡ ಡೆಂಗ್ಯೂ ಆರಂಭವಾಗಬಹುದು.
ತಡೆಯೋದು ಹೇಗೆ?
ಹೂವಿನ ಕುಂಡಗಳ ತಗ್ಗಿನಲ್ಲಿ ಸಂಗ್ರಹವಾದ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ. ರೆಫ್ರಿಜರೇಟರ್ನ ಡ್ರಿಪ್ ಟ್ರೇಯನ್ನು ಆಗಾಗ ಶುಚಿಗೊಳಿಸಿ. ಎಸಿಯ ಡ್ರೈನೇಜ್ ಪೈಪ್ನಿಂದ ನೀರು ಸಂಗ್ರಹವಾಗದಂತೆ ಖಚಿತಪಡಿಸಿಕೊಳ್ಳಿ. ತೊಟ್ಟಿಗಳು, ಡ್ರಮ್ಗಳು ಮತ್ತು ಇತರ ನೀರಿನ ಧಾರಕಗಳನ್ನು ಮುಚ್ಚಿಡಿ.
ಮನೆಯ ಕಿಟಕಿಗಳಿಗೆ ಸೊಳ್ಳೆ ಬಲೆಗಳನ್ನು ಅಳವಡಿಸಿ. ಸೊಳ್ಳೆ ನಿವಾರಕ ಕ್ರೀಮ್ಗಳು ಅಥವಾ ಸ್ಪ್ರೇಗಳನ್ನು ಬಳಸಿ. ರಾತ್ರಿಯಲ್ಲಿ ಸೊಳ್ಳೆ ಪರದೆಗಳನ್ನು ಬಳಸಿ.
ಮನೆಯ ಸುತ್ತಮುತ್ತಲಿನ ತ್ಯಾಜ್ಯವನ್ನು ತೆಗೆದುಹಾಕಿ. ಏಕೆಂದರೆ, ತ್ಯಾಜ್ಯದಲ್ಲಿ ನೀರು ಸಂಗ್ರಹವಾದರೆ ಸೊಳ್ಳೆಗಳು ಉತ್ಪತ್ತಿಯಾಗಬಹುದು.
ಸಮುದಾಯದಲ್ಲಿ ಡೆಂಗ್ಯೂ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುವುದು.