ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಕ್ಕಳು ಹಾಗೂ ವೃದ್ಧರು ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಡೆಂಘೀ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?
ಲಕ್ಷಣಗಳು
ಇದ್ದಕ್ಕಿದ್ದಂತೆಯೇ ಜ್ವರ
ತಡೆಯಲಾರದಷ್ಟು ತಲೆನೋವು
ಕಣ್ಣಿನ ಸುತ್ತಮುತ್ತ ನೋವು
ಜಾಯಿಂಟ್ ಹಾಗೂ ಮಸಲ್ ನೋವು
ವಾಕರಿಕೆ
ವಾಂತಿ
ಜ್ವರ ಬಂದ ನಂತರದ ಮೂರು ದಿನದಲ್ಲಿ ದೇಹದಲ್ಲಿ ಗುಳ್ಳೆಗಳು
ಮ್ಯೂಕಸ್‌ನಲ್ಲಿ ರಕ್ತ
ತಡೆಗಟ್ಟುವುದು ಹೇಗೆ?
ಇಡೀ ದೇಹ ಮುಚ್ಚುವಂಥ ಬಟ್ಟೆಗಳಿಗೆ ಆದ್ಯತೆ ನೀಡಿ
ರಾತ್ರಿ ಮಲಗುವಾಗ ಸೊಳ್ಳೆ ಪರದೆ
ಹಗಲು ಹೊತ್ತಿನಲ್ಲಿ ಸೊಳ್ಳೆ ಇದ್ದರೆ ಕಾಯಿಲ್ ಹಚ್ಚಿ
ಸಂಜೆ ನಾಲ್ಕರ ಮೇಲೆ ಬಾಗಿಲು, ಕಿಟಕಿ ಬಂದ್ ಮಾಡಿ
ಮಕ್ಕಳಿಗೆ ಸೊಳ್ಳೆ ಓಡಿಸುವ ಕ್ರೀಮ್ ಹಚ್ಚಿ
ಮನೆಯ ಒಳಗೆ ಅಥವಾ ಹೊರಗೆ ನೀರು ನಿಲ್ಲಲು ಬಿಡಬೇಡಿ
ಕಿಟಕಿಗಳು ತೆರೆದು ಮೆಶ್ ಹಾಕಿಸಿ, ಮನೆಯಲ್ಲಿ ಗಾಳಿ ಇರಲಿ
ಆದಷ್ಟು ಸಂಜೆಯ ಮೇಲೆ ಹೊರಗೆ ಹೋಗುವುದನ್ನು ತಡೆಗಟ್ಟಿ
ಬೆಚ್ಚಗಿನ, ಶುದ್ಧವಾದ ಆಹಾರ ಸೇವನೆ ಮಾಡಿ