ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯ ಬಾಂಗ್ಲಾದೇಶದಲ್ಲಿ ಡೆಂಗ್ಯೂ ಉಲ್ಬಣವಾಗಿದ್ದು, ಈವರೆಗೂ ಒಂದು ಸಾವಿರ ಮಂದಿ ಡೆಂಗ್ಯೂ ಸಓಂಕಿನಿಂದ ಮೃತಪಟ್ಟಿದ್ದಾರೆ.
ಒಟ್ಟಾರೆ 2,09,000 ಮಂದಿಗೆ ಸೋಂಕು ತಗುಲಿದ್ದು, ಮಕ್ಕಳಿಗೆ ಹೆಚ್ಚಾಗಿ ಸೋಂಕು ಬಾಧಿಸಿದೆ. 15 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವೇಗವಾಗಿ ಸೋಂಕು ಹರಡುತ್ತಿದ್ದು, ರೋಗಿಗಳಿಂದ ಆಸ್ಪತ್ರೆಗಳು ತುಂಬಿಹೋಗಿವೆ.
ಹವಾಮಾನದ ಬದಲಾವಣೆಯಿಂದ ಡೆಂಗ್ಯೂ ಹರಡುತ್ತಿದ್ದು, ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜ್ವರ, ತಲೆನೋವು, ವಾಕರಿಕೆ, ವಾಂತಿ ಹಾಗೂ ಸ್ನಾಯುನೋವಿನಿಂದ ರೋಗಿಗಳು ಬಳಲುತ್ತಾರೆ. ಗಂಭೀರವಾದ ಪ್ರಕರಣಗಳಲ್ಲಿ ರಕ್ತಸ್ರಾವವೂ ಆಗಲಿದೆ.