ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಯ್ತು ಡೆಂಗ್ಯೂ ಭೀತಿ, 4,323 ಪ್ರಕರಣಗಳು ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಏಕಾಏಕಿ ಹೆಚ್ಚಳವಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವರ್ಷ ಬರೋಬ್ಬರಿ 4,323 ಪ್ರಕರಣಗಳು ದಾಖಲಾಗಿವೆ.

ಜೂನ್‌ನಲ್ಲಿ 689, ಜುಲೈನಲ್ಲಿ 1,629 ಪ್ರಕರಣಗಳು ದಾಖಲಾಗಿದ್ದರೆ ಆಗಸ್ಟ್‌ನಲ್ಲಿ ಪ್ರಕರಣಗಳ ಸಂಖ್ಯೆ 1,589ಗೆ ಏರಿಕೆಯಾಗಿದೆ. ಸೆ.1ರಿಂದ 8ರವರೆಗೂ 416 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಮಳೆಯಾದಾಗ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ, ಇದರಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕಿದೆ. ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ಗಮನಸಿಬೇಕಿದೆ.

ಮನೆಯ ಕಿಟಕಿಗಳಿಗೆ ಮೆಶ್, ಸಂಜೆಯ ನಂತರ ಬಾಗಿಲು ಹಾಕುವುದು, ಮಕ್ಕಳಿಗೆ ಮೈತುಂಬಾ ಬಟ್ಟೆ ಹಾಕುವುದು, ಸೊಳ್ಳೆ ಪರದೆ ಕಟ್ಟಿಯೇ ಮಲಗುವುದು ಡೆಂಗ್ಯೂನಿಂದ ನಿಮ್ಮನ್ನು ರಕ್ಷಿಸಬಹುದಾಗಿದೆ.ಜ್ವರ, ಚಳಿ, ಶೀತ, ಮೈಕೈ ನೋವು, ಹೊಟ್ಟೆ ನೋವು ಬಂದಲ್ಲಿ ತಕ್ಷಣ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!