ಹೊಸದಿಗಂತ ವರದಿ ಗಂಗಾವತಿ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿಯೋರ್ವನ ವಿರುದ್ದ ಗಂಗಾವತಿ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಗಂಗಾವತಿಯಲ್ಲಿ ನಡೆದಿದ್ದ ವೃದ್ಧರೋರ್ವರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿ ಅಮೀರ ಅಮ್ಮು ಎಂಬಾತ ತನ್ನ ಅಮ್ಮುರಾಕ್ ಜಿವಿಟಿ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೃದ್ಧರ ಫೋಟೋ ಸಹಿತ ಆರೆಸ್ಸೆಸ್ ಬಗ್ಗೆ ಅವಹೇಳನಕಾರಿ ಬರಹ ಹೊಂದಿರುವ ಪೋಸ್ಟ್ ಹಾಕಿದ್ದ. ಇದು ಸಮಾಜ ಸ್ವಾಸ್ಥ್ಯ ಕದಡುವ ಉದ್ದೇಶ ಹೊಂದಿರುವ ಹಿನ್ನೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.