ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಹಾಕಿದ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನಾ ಸಭೆ ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿ ಶುಕ್ರವಾರ ನಡೆದಿದೆ.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ , ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಮಾಜಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧನಾ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಸೇರಿದಂತೆ ಪ್ರಮುಖರು ಮಾತನಾಡಿ, ಓರ್ವ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅತ್ಯುನ್ನತ ಸ್ಥಾನವಾದ ಶಾಸಕ ಸ್ಥಾನವನ್ನು ಅಲಂಕರಿಸಿ ಜಿಲ್ಲೆಯ ಕಾಂಗ್ರೆಸ್ ನಾಯಕರೇ ಹೇಳುವಂತೆ ಸಚಿವರ ಬಳಿಗೆ ಪಕ್ಷಾತೀತವಾಗಿ ಕರೆದೊಯ್ದು ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ ಹೆಣ್ಣಿಗೆ ಅಗೌರವ ತೋರಿದ ವ್ಯಕ್ತಿಯ ವಿರುದ್ದ ಕ್ರಮವಾಗುತ್ತಿಲ್ಲ. ಅಲ್ಲದೇ ಓರ್ವ ಶಾಸಕಿಗೆ ಈ ಪರಿಸ್ಥಿತಿ ಎಂದಾದರೆ ಈ ಕಾಂಗ್ರೆಸ್ ಸರಕಾರದಲ್ಲಿ ಸಾಮಾನ್ಯ ಜನರ ಪರಿಸ್ಥಿತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಇಂದು ಬಂಧಿಸದೇ ಇದ್ದ ಪಕ್ಷದಲ್ಲಿ ಉಗ್ರ ಹೋರಾಟಕ್ಕೆ ಕರಾವಳಿ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ ಬಾಯ್ಲರ್ ಸ್ಫೋಟ: ಪರಿಹಾರ ಇನ್ನೂ ಸಿಕ್ಕಿಲ್ಲ, ಕಾರ್ಖಾನೆ ವಿರುದ್ಧ ಆಕ್ರೋಶ
ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ ಎಸ್ ಎನ್ ಮನ್ಮಥ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವೊಳಿಕೆ, ಖಜಾಂಚಿ ಸುಬೋದ್ ಶೆಟ್ಟಿ ಮೇನಾಲ, ವೆಂಕಟ್ ದಂಬೆಕೋಡಿ , ಚಂದ್ರ ಕೋಲ್ಚಾರ್, ಸುರೇಶ್ ಕಣೆಮರಡ್ಕ, ಎ.ಟಿ ಕುಸುಮಾಧರ, ರಮೇಶ್ ಇರಂತಮಜಲು, ಸುನೀಲ್ ಕೇರ್ಪಳ, ವಿಕ್ರಂ ಎ.ವಿ ಅಡ್ಪಂಗಾಯ, ಚಂದ್ರಶೇಖರ ಶಾಸ್ತ್ರಿ, ಕಿಶನ್ ಜಬಳೆ, ಪುಸ್ಪಾ ಮೇದಪ್ಪ, ಗುಣವತಿ ಕೊಲ್ಲಂತಡ್ಕ, ಸುವರ್ಣಿನಿ, ವಿನಯ ಕುಮಾರ್ ಮುಳುಗಾಡು, ಶಶಿಕಲಾ ನೀರಬಿದರೆ, ನಾರಾಯಣ ಬಂಟ್ರಬೈಲು, ಕಿಶನ್ ಜಬಳೆ, ಅಶೋಕ್ ಅಡ್ಕಾರ್, ಸಂತೋಷ್ ಕುತ್ತಮೊಟ್ಟೆ, ಶಿವಪ್ರಸಾದ್ ಉಗ್ರಾಣಿಮನೆ, ಮಹೇಶ್ ರೈ ಮೇನಾಲ, ಬುದ್ದನಾಯ್ಕ್, ಕೇಶವ ಅಡ್ತಳೆ, ನವೀನ್ ಎಲಿಮಲೆ, ಶಂಕರ್ ಪೆರಾಜೆ, ಪೂರ್ಣಿಮಾ ಸೂಂತೋಡು, ಶಂಕರ್ ಪೆರಾಜೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

