ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಮಾತು: ಮಾಲ್ಡೀವ್ಸ್​ನ ಮೂವರು ಸಚಿವರ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಹಾಗೂ ಭಾರತೀಯರ ಬಗ್ಗೆ ಅವಹೇಳನಕಾರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮಾಲ್ಡೀವ್ಸ್​ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರ ಭಾನುವಾರ (ಜ. 7) ಅಮಾನತುಗೊಳಿಸಿದೆ.

ವಜಾಗೊಂಡ ಸಚಿವರು ಮಾರಿಯಂ ಶಿಯುನಾ, ಮಾಲ್ಶಾ ಮತ್ತು ಹಸನ್ ಜಿಹಾನ್ ಎನ್ನಲಾಗಿದೆ.

ಪ್ರಧಾನಿ ಮೋದಿ ಬಗ್ಗೆ ಮಾಲ್ಡೀವ್ಸ್ ಸಚಿವರಿಂದ ಅವಹೇಳನಕಾರಿ ಹೇಳಿಕೆ ಬಂದಿದ್ದಕ್ಕೆ ಭಾರತ ತಗಾದೆ ವ್ಯಕ್ತಪಡಿಸಿದೆ. ಆಕ್ಷೇಪ ವ್ಯಕ್ತಪಡಿಸಿದೆ.

ಮಾಲ್ಡೀವ್ಸ್​ನ ಯುವ ಸಬಲೀಕರಣ, ಮಾಹಿತಿ ಮತ್ತು ಕಲೆ ಖಾತೆಯ ಉಪ ಸಚಿವೆ ಆಗಿದ್ದ ಮಾರಿಯಂ ಶಿಯುನಾ ಅವರು ನರೇಂದ್ರ ಮೋದಿ ಅವರನ್ನು ಕ್ಲೌನ್ (ವಿದೂಷಕ) ಹಾಗು ಇಸ್ರೇಲ್​ನ ಕೈಗೊಂಬೆ ಎಂದು ಲೇವಡಿ ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಮಾರಿಯಂ ಮಾತ್ರವಲ್ಲ, ಇತರಿಬ್ಬರು ಸಚಿವರಾದ ಮಾಲ್ಷಾ ಮತ್ತು ಹಸನ್ ಜಿಹಾನ್ ಕೂಡ ಪ್ರಧಾನಿ ಮೋದಿ ಹಾಗೂ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರ ಬಗ್ಗೆ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಮಾತುಗಳನ್ನು ಆಡಿದ ಬಳಿಕ ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಆಗಿದೆ. ಸಾವಿರಾರು ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!