ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು, ಮುಂಬೈನಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಇಸ್ಲಾಂ ಬೋಧಕ ಮುಫ್ತಿ ಸಲ್ಮಾನ್ ಅಝಾರಿಯನ್ನು ಬಂಧಿಸಿಲಾಗಿದೆ.
ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದುಗಳನ್ನು ನಾಯಿಗಳಿಗೆ ಹೋಲಿಸಿದ ನಂತರ ಅದೇ ಘಟನೆಗೆ ಸಂಬಂಧಿಸಿದಂತೆ ಎಟಿಎಸ್ ಅಧಿಕಾರಿಗಳು ಮುಂಬೈನಲ್ಲಿ ಮುಫ್ತಿ ಸಲ್ಮಾನ್ ಅಝಾರಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಫೆ. 4 ಗುಜರಾತ್ ಎಟಿಎಸ್ ಅಧಿಕಾರಿಗಳು ಮುಫ್ತಿ ಸಲ್ಮಾನ್ ಅಝಾರಿ ಅವರನ್ನು ಬಂಧಿಸಿ ಘಟ್ಕೋಪರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದರು. ಕೆಲವು ದಿನಗಳ ಹಿಂದೆ ಅವರು ಗುಜರಾತ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ದ್ವೇಷಪೂರಿತ ಭಾಷಣಗಳನ್ನು ಮಾಡಿದ್ದರು ಎನ್ನಲಾಗಿದೆ. “ಈಗ ನಾಯಿಗಳ ಕಾಲ ನಡೆಯುತ್ತಿದೆ. ಮುಂದೆ ನಮಗೂ ಒಂದು ಕಾಲ ಬರುತ್ತದೆ” ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ವಿಡಿಯೋ ವೈರಲ್ ಆದ ನಂತರ ಆತನನ್ನು ಬಂಧಿಸಲಾಗಿದೆ. ಆದರೆ, ಯಾವ ನಿರ್ದಿಷ್ಟ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂಬುದು ತಿಳಿದುಬಂದಿಲ್ಲ.