ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನದೇ ಸ್ಥಾನ ನಿರ್ಮಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ಈಗ ತಮ್ಮ ಮುಂದಿನ ಚಿತ್ರ “ವಾರಣಾಸಿ”ಗಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಫಸ್ಟ್ ಲುಕ್ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದ್ದು, ಅದೇ ವೇಳೆ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಸದ್ಯ ಪ್ರಿಯಾಂಕಾ ಗೋವಾದಲ್ಲಿ ತನ್ನ ಸ್ನೇಹಿತರೊಂದಿಗೆ ವಿಶ್ರಾಂತಿ ದಿನಗಳನ್ನು ಕಳೆಯುತ್ತಿದ್ದಾರೆ. ಸೂರ್ಯ, ಮರಳು ಮತ್ತು ಸಮುದ್ರದ ಮಜಾ ಆನಂದಿಸುತ್ತಿರುವ ಈ ಫೋಟೋಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಗೋವಾ ತನ್ನ ನೆಚ್ಚಿನ ನಗರಗಳಲ್ಲಿ ಒಂದೆಂದು ಹೇಳಿದ ಪ್ರಿಯಾಂಕಾ, ಅಲ್ಲಿನ ಜನ, ಆಹಾರ, ಸಂಸ್ಕೃತಿ ತಮ್ಮನ್ನು ಸದಾ ಮಂತ್ರಮುಗ್ಧಗೊಳಿಸುತ್ತವೆ ಎಂದು ಬರೆದಿದ್ದಾರೆ.

