ಹೊಸದಿಗಂತ ಹಾಸನ :
ಬಿರುಗಾಳಿ ಸಹಿತ ಮಳೆಯ ನಡುವೆಯೂ ಸಕಲೇಶಪುರ ತಾಲ್ಲೂಕಿನ ಉದೇವಾರ ಗ್ರಾಮದಲ್ಲಿ
ಭೀಮ ಎಂಬ ದೈತ್ಯಾಕಾರದ ಆನೆ ಕಾಣಿಸಿಕೊಂಡಿದೆ.
ಬೆಳ್ಳಂಬೆಳಿಗ್ಗೆ ಕೆ.ಎಚ್.ಬಸವರಾಜು ಎಂಬುವವರ ಮನೆಯ ಬಳಿ ಆಹಾರ ಅರಸಿ ಮರಿಯೊಂದಿಗೆ ದೈತ್ಯಾಕಾರದ ಕಾಡಾನೆ ಭೀಮ ಕಾಣಿಸಿಕೊಂಡಿದೆ. ಕಾಡಾನೆ ಕಂಡು ಭಯಭೀತರಾದ ಬಸವರಾಜು ಕುಟುಂಬಸ್ಥರು, ಕಾಡಾನೆಗಳು ಮನೆಯ ಬಳಿ ಬಂದು ನಿಲ್ಲುತ್ತಿದ್ದಂತೆ ಕಿಟಕಿಯಿಂದ ಕೂಗಿದ್ದಾರೆ. ತಕ್ಷಣವೇ ನಿಧಾನವಾಗಿ ಮರಿ ಜೊತೆ ಭೀಮ ಆನೆ ವಾಪಾಸ್ ಹೊರಟಿದೆ. ಕಾಡಾನೆಗಳ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬೇಲೂರು ತಾಲ್ಲೂಕು ಅಂಕಿಹಳ್ಳಿ ಗ್ರಾಮದ ಕಾರ್ಮಿಕ ಮಹಿಳೆಯನ್ನು ಬಲಿ ಪಡೆದ ಕಾಡಾನೆಗಳ ಹಿಂಡು ಸಮೀಪದ ಕಾಫಿ ತೋಟದಲ್ಲಿ ಸಂಚಾರ ನಡೆಸುತ್ತಿದ್ದು, ಹೊಸೂರು ಗ್ರಾಮದಲ್ಲಿ ಬೀಡು ಬಿಟ್ಟಿವೆ.