ಆರ್ಥಿಕ ನಿರ್ಬಂಧಗಳ ಹೊರತಾಗಿಯೂ ಬಲಗೊಂಡಿದೆ ರಷ್ಯದ ರುಬೆಲ್ಸ್ ಕರೆನ್ಸಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪಾಶ್ಚಾತ್ಯ ದೇಶಗಳು ಹಲವು ಬಗೆಯ ಆರ್ಥಿಕ ನಿರ್ಬಂಧಗಳನ್ನು ಹೇರಿರುವುದರ ನಡುವೆಯೂ ರಷ್ಯದ ಕರೆನ್ಸಿ ರುಬೆಲ್ಸ್ ತನ್ನ ದೃಢತೆ ತೋರಿಸಿದೆ.

ಮಾರ್ಚ್ ಪ್ರಾರಂಭದಲ್ಲಿ ಡಾಲರ್ ಎದುರು ರುಬೆಲ್ಸ್ ಗಣನೀಯ ಕುಸಿತ ಕಂಡಿತ್ತು. ಆದರೆ, ಗುರುವಾರ ಒಂದು ಡಾಲರಿಗೆ 76 ರುಬೆಲ್ಸ್ ಎಂಬ ಮಟ್ಟಕ್ಕೆ ಬಂದು ನಿಂತಿದೆ. ಉಕ್ರೇನ್ ವಿರುದ್ಧ ರಷ್ಯ ಆಕ್ರಮಣ ಮಾಡುವುದಕ್ಕೆ ಮೊದಲೂ ರುಬೆಲ್ಸ್ ಕರೆನ್ಸಿಯು ಡಾಲರ್ ವಿರುದ್ಧ ಇಷ್ಟು ಬಲವಾಗಿರಲಿಲ್ಲ.

ಬಡ್ಡಿದರವನ್ನು ಶೇ. 20ಕ್ಕೆ ಏರಿಸುವುದೂ ಸೇರಿದಂತೆ ತನ್ನ ಕರೆನ್ಸಿ ಮೌಲ್ಯವನ್ನು ರಕ್ಷಿಸಿಕೊಳ್ಳುವುದಕ್ಕೆ ರಷ್ಯ ಹಲವು ಉಪಕ್ರಮಗಳನ್ನು ಅನುಸರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!