ಗೋಮಾಂಸ ಪತ್ತೆ: ವಾಹನ ಸಹಿತ ಇಬ್ಬರ ಬಂಧನ

ಹೊಸದಿಗಂತ ವರದಿ,ಮಡಿಕೇರಿ:

ಅಕ್ರಮವಾಗಿ ಗೋಮಾಂಸ ಖರೀದಿಸಿ ಅದನ್ನು ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ಸು, ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಅದರಲ್ಲಿದ್ದ 12ಕೆ.ಜಿ.ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕೊಡಗಿನ ತಿತಿಮತಿ ಸಮೀಪದ ಭದ್ರಗೋಳ ಗ್ರಾಮದ ನಿವಾಸಿಗಳಾದ ಎಂ.ಕೆ.ಹಂಸ(32) ಹಾಗೂ ಕೆ.ಎಂ.ರಫೀಕ್ (33) ಎಂದು ಗುರುತಿಸಲಾಗಿದೆ.
ವೀರಾಜಪೇಟೆ ಹೊರವಲಯದ ಪೆರುಂಬಾಡಿ ಚೆಕ್‌ ಪೋಸ್ಟ್’ನಲ್ಲಿ ಮುಂಜಾನೆ 6ಗಂಟೆ ಸುಮಾರಿಗೆ ಕೇರಳ ಕಡೆಯಿಂದ ಬಂದ ಕೆಎ09 ಎನ್1820 ರ ಕಾರನ್ನು ಚುನಾವಣಾ ಕರ್ತವ್ಯದಲ್ಲಿದ್ದ‌ ಅಧಿಕಾರಿಗಳು ಮತ್ತು ಪೊಲೀಸ್‌ ಸಿಬ್ಬಂದಿಗಳು ತಪಾಸಣೆ ಮಾಡಿದಾಗ ಕೈಚೀಲವೊಂದರಲ್ಲಿ ಗೋಮಾಂಸ ಇರುವುದು ಪತ್ತೆಯಾಗಿದೆ.
ಆರೋಪಿಗಳು ಕೇರಳ ರಾಜ್ಯದಿಂದ ವೀರಾಜಪೇಟೆ ಮಾರ್ಗವಾಗಿ ಪೊನ್ನಂಪೇಟೆಗೆ ತೆರಳುತಿದ್ದರನ್ನಲಾಗಿದ್ದು, ಕೇರಳ ರಾಜ್ಯದ ಇರಿಟ್ಟಿಯಿಂದ ಗೋಮಾಂಸವನ್ನು ಖರೀದಿಸಿ ತಂದಿದ್ದರೆಂದು ಹೇಳಲಾಗಿದೆ.
ಪರವಾನಗಿ ಇಲ್ಲದೆ‌ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಆರೋಪದಡಿ ಇಬ್ಬರ‌ ವಿರುದ್ಧ ವೀರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here