ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಗರ್ ಸೋಲಿನ ನಂತರ ನಟ ವಿಜಯ್ ದೇವರಕೊಂಡ ಬಾಲಿವುಡ್ ಸುದ್ದಿ ಬಿಟ್ಟುಬಿಟ್ಟಿದ್ದಾರೆ.
ಟಾಲಿವುಡ್ನಲ್ಲಿ ವಿಜಯ್ಗೆ ಸಾಕಷ್ಟು ಫ್ಯಾನ್ಸ್ ಇದ್ದು, ಅಲ್ಲಿಯೇ ನೆಲೆ ಗಟ್ಟಿಮಾಡಿಕೊಳ್ಳೋ ಯೋಚನೆಯನ್ನು ವಿಜಯ್ ಮಾಡಿದ್ದಾರೆ.
ವಿಜಯ್ ಸದ್ಯಕ್ಕೆ ಮೋಸ್ಟ್ ಬ್ಯುಸಿಯೆಸ್ಟ್ ಆಕ್ಟರ್ ಎನಿಸಿಕೊಂಡಿದ್ದಾರೆ. ವಿಜಯ್ ಕೈಯಲ್ಲಿ ಮೂರು ಸಿನಿಮಾಗಳಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಕಾಣಿಸಿದ್ದಾರೆ.
ವಿಜಯ್ ಹಾಗೂ ಸಮಂತಾ ನಟನೆಯ ಖುಷಿ ಸಿನಿಮಾ ಶೂಟಿಂಗ್ ಆರಂಭವಾಗಿ ಮತ್ತೆ ಮಧ್ಯಕ್ಕೆ ನಿಂತು ಹೋಗಿತ್ತು. ಸಮಂತಾ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡಿದ್ದು, ಸಮಂತಾ ಶೂಟಿಂಗ್ಗೆ ವಾಪಾಸಾಗಿದ್ದಾರೆ.
ಇನ್ನು ಕನ್ನಡದ ನಟಿ ಶ್ರೀಲೀಲಾ ಜೊತೆಗೂ ವಿಜಯ್ ಸಿನಿಮಾವೊಂದನ್ನು ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಮೃಣಾಲ್ ಠಾಕೂರ್ ಜೊತೆಗಿನ ಸಿನಿಮಾಕ್ಕೆ ಮಹೂರ್ತ ಸಮಾರಂಭ ನೆರವೇರಿದ್ದು, ಸದ್ಯದಲ್ಲೇ ಸಿನಿಮಾಗಳು ಸೆಟ್ಟೇರಲಿವೆ.
ಎಲ್ಲ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿದ್ದು, ಈ ವರ್ಷ ಹಾಗೂ ಮುಂದಿನ ವರ್ಷ ವಿಜಯ್ಗೆ ಲಕ್ಕಿಯಾಗಿರಲಿವೆ.