ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ ಯೋಗೇಶ್ವರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇತ್ತ ಜೆಡಿಎಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಚಟುವಟಿಕೆ ಚುರುಕುಗೊಂಡಿದೆ. ಈ ನಡುವೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಭೇಟಿ ಮಾಡಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ನಿಲ್ಲುತ್ತೇನೆ ಅಂತ ಹೇಳಿಲ್ಲ. ಕಳೆದ ಎರಡೂ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಣ್ಣನನ್ನ ಜನ ಗೆಲ್ಲಿಸಿದ್ದಾರೆ. ಇದು ಕುಮಾರಣ್ಣ ಅವರ ಸ್ವಕ್ಷೇತ್ರ. ದೆಹಲಿಯ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಯಾವುದೇ ರೀತಿಯ ತೀರ್ಮಾನ ತಗೊಳ್ಳಿ ಅಂತ ಹೇಳಿದ್ದಾರೆ. ಆದರೂ ಮೈತ್ರಿಗೆ ಭಂಗವಾಗಬಾರದು ಅಂತ ನಾವಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ತೀರ್ಮಾನ ಏನೇ ಇದ್ರೂ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ತಗೋತೀವಿ. ನಮಗೆ ಸ್ವಾತಂತ್ರ‍್ಯ ಇದ್ದಾಗಿಯೂ ನಾವು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇದಕ್ಕೆ ಕಾರಣ ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಬೇಕು ಅಂತ. ಒಬ್ಬ ವ್ಯಕ್ತಿಯ ನಡವಳಿಕೆ ನೋಡಿ, ನಾವು ಯಾವುದೇ ರೀತಿಯ ಆತುರದ ನಿರ್ಧಾರ ಮಾಡಲ್ಲ. ಯೋಗೀಶ್ವರ್ ವಿಚಾರದಲ್ಲಿ ನಾವು ದೊಡ್ಡ ಔದಾರ್ಯತೆ ತೋರಿದ್ದೇವೆ. ನಮ್ಮ ನಾಯಕರು ಯೋಗೇಶ್ವರ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ಇನ್ನೇನು ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.