ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಒಕ್ಕಲಿಗ ಸಮುದಾಯದವರು ಮತ್ತು ಎರಡು ವಿಭಿನ್ನ ರಾಜಕೀಯ ಪಕ್ಷಗಳ ರಾಜ್ಯಾಧ್ಯಕ್ಷರು. ತಾನೇ ಪ್ರಬಲ ಒಕ್ಕಲಿಗ ನಾಯಕ ಅಂತ ಸಾಧಿಸಲು ಅವರ ನಡುವೆ ಪೈಪೋಟಿ ನಡೆಯುತ್ತಿದೆಯೇ? ಎಂದು ಈ ಬಗ್ಗೆ ಡಿ.ಕೆ.ಸುರೇಶ್ ಅವರನ್ನು ಕೇಳಿದಾಗ, ಒಕ್ಕಲಿಗ ನಾಯಕತ್ವ ಯಾರದ್ದೂ ಅಲ್ಲ, ಇಲ್ಲಿರೋದು ಒಕ್ಕಲಿಗ ಸಮುದಾಯ ನಾಯಕತ್ವದ ಪ್ರಶ್ನೆ ಅಲ್ಲ, ಒಕ್ಕಲಿಗರು ಸ್ವಾಭಿಮಾನಿಗಳು ಮತ್ತು ಯಾವ ಸರ್ಕಾರಕ್ಕೆ ಬೆಂಬಲಿಸಬೇಕು ಅನ್ನೋದನ್ನು ಚೆನ್ನಾಗಿ ತಿಳಿದಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.
ನಿನ್ನೆ ಶಿವಕುಮಾರ್ ಹೇಳಿದ್ದು, ಹಿಂದೆ ತಮ್ಮ ಸರ್ಕಾರ ಪತನವಾಗಲು ಕಾರಣರಾದವರನ್ನು ಶ್ರೀಗಳ ಬೇಟಿಗೆ ಕರೆದೊಯ್ದ ವಿಚಾರವನ್ನು, ಎಂದರು. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ, ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದೊಯ್ಯುವ ಜವಾಬ್ದಾರಿ ಅವರ ಮೇಲಿದೆ.
ಕುಮಾರಸ್ವಾಮಿ ಅವರು ಹೇಳೋದೆಲ್ಲ ಸತ್ಯವೇ? ದೇವೇಗೌಡರ ಕುಟುಂಬಕ್ಕೆ ದಶಕಗಳಿಂದ ಶಿವಕುಮಾರ್ ಕುಟುಂಬದೊಂದಿಗೆ ಹಗೆತನವಿದೆ, ಅದರೆ ನಮ್ಮ ಕುಟುಂಬ ಯಾವತ್ತೂ ಹಗೆ ಸಾಧಿಸಿಲ್ಲ, ನಮ್ಮ ಹೇಳಿಕೆಗಳನ್ನು ಅವರು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದರೆ ಎಂದು ಹೇಳಿದರು.