ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಳೆದ 54 ವರ್ಷಗಳಿಂದ ನಾನೂ, ದೇವೇಗೌಡರು ಜೊತೆ ಜೊತೆಯಾಗಿ ಕರ್ತವ್ಯ ನಿರ್ವಹಿಸಿದ್ದೇವೆ….
ದಿಢೀರ್ ಏನಾಯಿತು ಗೊತ್ತಿಲ್ಲ, ನನ್ನನ್ನು ಪ್ರೀತಿಸಿದರು, ಮೋದಿ ಅವರನ್ನು ಮದುವೆಯಾದರು…
ಹೀಗೆಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಚಟಾಕಿ ಹಾರಸಿದರೆ ಸದನ ಕೆಲಕಾಲ ನಗೆಗಡಲಲ್ಲಿ ತೇಲಿತು!
ರಾಜ್ಯಸಭೆಯಲ್ಲಿ ಇಂದು ನಿವೃತ್ತಿ ಹೊಂದುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹಿತ ಹಲವು ಸಂಸದರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಖರ್ಗೆ ದೇವೇಗೌಡರ ಜೊತೆಗಿನ ಬಾಂಧವ್ಯವನ್ನು ಹೇಳಿಕೊಂಡು ಹಳೆಯ ನೆನಪುಗಳಿಗೆ ಜೀವತುಂಬಿದರು.
ಸದನದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಜನರ ವಿಚಾರಗಳ ಚರ್ಚೆಗಳು ನಡೆಯಬೇಕು ಎಂದು ಹೇಳಿದರು.
ರಾಜಕೀಯದಲ್ಲಿ ತನ್ನನ್ನು ತೊಡಗಿಸಿಗೊಂಡಿರುವ ವ್ಯಕ್ತಿ, ಒಂದಲ್ಲ ಒಂದು ರೀತಿಯಲ್ಲಿ ಸಾರ್ವಜನಿ ಕ್ಷೇತ್ರದಲ್ಲೂ ನಿರತನಾಗಿರುತ್ತಾನೆ. ಹೀಗಾಗಿ ಅಲ್ಲಿ ನಿವೃತ್ತಿ ಎಂಬುವುದು ಇಲ್ಲ. ತಮ್ಮಲ್ಲಿನ ಶಕ್ತಿ ಹಾಗೂ ಉತ್ಸಾಹ ಇರುವವರೆಗೆ ಕೆಲಸ ಮಾಡುತ್ತಾ ಸಾಗಬೇಕು ಎಂದು ಖರ್ಗೆ ಹೇಳಿದರು.



