ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ಎಚ್.ಡಿ. ದೇವೇಗೌಡ ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಪೆನ್‌ಡ್ರೈವ್ ಈ ಕುಟುಂಬದ ಆಸ್ತಿ, ದೇವೇಗೌಡರ ಕುಟುಂಬ ಈಗ ಜನರ ಬಾಯಲ್ಲಿ ‘ಪೆನ್‌ಡ್ರೈವ್ ಕುಟುಂಬ’ ಆಗಿದೆ.
ಜೆಡಿಎಸ್ ಗುರುತು ತೆನೆ ಹೊತ್ತ ಮಹಿಳೆ ಇದ್ದ ಜಾಗದಲ್ಲಿ ಪೆನ್‌ಡ್ರೈವ್ ಹೊತ್ತ ಮಹಿಳೆ ಬರಬೇಕು ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮಾತನಾಡಿದ ಅವರು, ಜೆಡಿಎಸ್‌ನ ಮಿತ್ರ ಪಕ್ಷವಾದ ಬಿಜೆಪಿಯವರಿಂದಲೇ ಪೆನ್‌ಡ್ರೈವ್ ಬಿಡುಗಡೆಯಾಗಿದೆ. ಅವರನ್ನು ಟೀಕಿಸಲಾಗದೆ ಕುಮಾರಸ್ವಾಮಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.