ತೆಲಂಗಾಣದ ಅಭಿವೃದ್ಧಿ| ಮೋದಿ ಜೊತೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂಸಿ ನದಿ ಪುನರಾಭಿವೃದ್ಧಿ, ಹೈದರಾಬಾದ್ ಗೆ ಮೆಟ್ರೊ ರೈಲು ಯೋಜನೆ ವಿಸ್ತರಣೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆ ಕುರಿತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ.

ಹೈದರಾಬಾದ್ ಗೆ ಮೆಟ್ರೊ ರೈಲು ಬರುತ್ತಿರುವುದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ತಕ್ಷಣದ ಅನುಮೋದನೆ ನೀಡುವಂತೆ ಪ್ರಧಾನಿಗೆ ಒತ್ತಾಯಿಸಿದ್ದಾರೆ. ಇದೇ ವೇಳೆ ₹24.269 ಕೋಟಿ ವೆಚ್ಚದಲ್ಲಿ ಐದು ಕಾರಿಡಾರ್‌ಗಳೊಂದಿಗೆ 76.4 ಕಿ.ಮೀ ಉದ್ದದ ಹೈದರಾಬಾದ್ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಕುರಿತು ಚರ್ಚೆ ನಡೆಸಿದ್ದಾರೆ.

ಮೂಸಿ ನದಿಯ ಪುನರುಜ್ಜಿವನಕ್ಕಾಗಿ ₹20,000 ಕೋಟಿ ಆರ್ಥಿಕ ನೆರವು ಸೇರಿದಂತೆ, ನದಿ ದಡದಲ್ಲಿರುವ ಮಹಾತ್ಮಾ ಗಾಂಧಿ ಸ್ಮಾರಕ ಅಭಿವೃದ್ಧಿ, ತಡೆಗೋಡೆಗಳ ನಿರ್ಮಾಣ ಮತ್ತು ಮೂಸಿ ನದಿಯನ್ನು ಗೋದಾವರಿ ನದಿಯೊಂದಿಗೆ ಜೋಡಿಸುವ ಬಗ್ಗೆ ಮೋದಿ ಜೊತೆ ಚರ್ಚೆ ನಡೆಸಲಾಯಿತು ಎಂದು ರೆಡ್ಡಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಸರಕುಗಳ ರಫ್ತು ಮತ್ತು ಅಮದುಗಳಿಗೆ ಅನುಕೂಲವಾಗುವಂತೆ ಹೈದರಾಬಾದ್‌ನ ಪ್ರಾದೇಶಿಕ ರಿಂಗ್ ರೋಡ್ ಬಳಿ ಡ್ರೈ ಪೋರ್ಟ್ ಮಂಜೂರು ಮಾಡುವಂತೆಯೂ ಮನವಿ ಮಾಡಲಾಗಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!