ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆಗೆ ಭಕ್ತ ಪ್ರವಾಹವೇ ಹರಿದುಬರುತ್ತಿದ್ದು, ಇದುವರೆಗೆ ಬರೋಬ್ಬರಿ 25,69,671 ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.
ಈ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಪಿಎಸ್ ಪ್ರಶಾಂತ್ ಅವರು ಅಧಿಕೃತ ಅಂಕಿ ಅಂಶ ಬಿಡುಗಡೆ ಮಾಡಿದ್ದು, ನಾಳೆ (ಡಿ.26) 64 ಸಾವಿರ, ಡಿ.27 ರಂದು 70 ಸಾವಿರ ಭಕ್ತರಿಗೆ ವರ್ಚುವಲ್ ಕ್ಯೂಗಳ ಮೂಲಕ ಬುಕ್ಕಿಂಗ್‌ಗಳನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಭಕ್ತರಿಗೆ ಅನುಕೂಲವಾಗುವಂತೆ ಜನವರಿಯಿಂದ 80 ಸಾವಿರ ಭಕ್ತರಿಗೆ ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ದಿನಕ್ಕೆ ಸುಮಾರು 10,000 ಸ್ಪಾಟ್ ಬುಕಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. 15 ಸಾವಿರ ಭಕ್ತರಿಗೆ ಮಲೆ (ಪರ್ವತ) ಏರಲು ಅವಕಾಶ ನೀಡುವ ಅವಕಾಶ ದೇವಸ್ವಂ ಮಂಡಳಿಗಿದೆ ಎಂದು ಹೈಕೋರ್ಟ್ ಈಗಾಲೇ ಹೇಳಿದೆ.