9ನೇ ದಿನವೂ ಹಾಸನಾಂಬೆ ಉತ್ಸವಕ್ಕೆ ಭಕ್ತಸಾಗರ, ವಿಐಪಿ ದರುಶನಕ್ಕೆ ಮುಗಿಬಿದ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಸನದ ಅಧಿದೇವತೆ, ವರುಷಕ್ಕೊಮ್ಮೆ ದರುಶನ ಭಾಗ್ಯ ನೀಡೋ ಹಾಸನಾಂಬೆ ಉತ್ಸವ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಅಮ್ನವರ ದರುಶನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದು, ಕಿಕ್ಕಿರಿದ ಜನಸಾಗರ ಕಂಡುಬಂತು.

ಇನ್ನೂ ನಿನ್ನೆ ಧರ್ಮದರ್ಶನ ಸರತಿ ಸಾಲಿನಲ್ಲಿ ಉಂಟಾದ ವಿದ್ಯುತ್‌ ಅವಘಡದಿಂದಾಗಿ ಭಯಭೀತರಾದ ಜನ, ವಿಐಪಿ ದರುಶನದತ್ತ ಮುಖ ಮಾಡಿದ್ದಾರೆ. 300, 1000ರೂಪಾಯಿ ಹಣ ಕೊಟ್ಟು ವಿಐಪಿ ಸರತಿ ಸಾಲಿನಲ್ಲಿ ಜನ ನಿಂತಿದ್ದಾರೆ. ಟಿಕೆಟ್‌ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ವಿಐಪಿ ದರುಶನದ ಸರತಿ ಸಾಲು ಭಕ್ತರಿಂದ ತುಂಬಿ ತುಳುಕುತ್ತಿದೆ.

ದೇವಾಲಯದ ಬಾಗಿಲು ಮುಚ್ಚಲು ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿದ್ದು, ದೂರದೂರಿಂದ ಜನ ಹಾಸನಾಂಬೆಯ ಮಹಿಮೆಯನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಇನ್ನೂ ನಿನ್ನೆ ಉಂಟಾದ ಅವಘಡದಿಂದಾಗಿ ಎಚ್ಚೆತ್ತ ಜಿಲ್ಲಾಡಳಿತ, ಹೆಚ್ಚಿನ ಭದ್ರತೆ ಕೈಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!