ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕರ ಸಂಕ್ರಾಂತಿ ಹಿಂದೂಗಳ ವಿಶೇಷ ಹಬ್ಬಗಳಲ್ಲಿ ಒಂದು. ಈ ದಿನದಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ದೇಶದ ಬೇರೆ ಬೇರೆ ರಾಜ್ಯದ ಜನರು ಮಕರ ಸಂಕ್ರಾಂತಿಯನ್ನು ವಿಭಿನ್ನ ಹೆಸರಿನಲ್ಲಿ ಮತ್ತು ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಾರೆ. ಮಕರ ಸಂಕ್ರಾಂತಿಯಂದು ವಾರಣಾಸಿಯ ಗಂಗಾ ಸ್ನಾನಕ್ಕೆ ಬಹಳ ಮಹತ್ವವಿದೆ. ಸಂಕ್ರಾಂತಿಯ ದಿನದಂದು ಗಂಗಾಸ್ನಾನ ಮಾಡಿದರೆ ಏಳು ಜನ್ಮದ ಪಾಪ ಕಳೆಯುತ್ತೆ ಎಂಬ ನಂಬಿಕೆ ಇದೆ. ಭಕ್ತರು ಮಕರ ಸಂಕ್ರಾಂತಿಯದು ಗಂಗಾ ನದಿಯಲ್ಲಿ ಸ್ನಾನ ಮಾಡಿ ದಾನ, ಧರ್ಮದಂತಹ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ. ಮಕರ ಸಂಕ್ರಾಂತಿಯ ಮೊದಲ ದಿನವಾದ್ದರಿಂದ ಇಂದು ಉತ್ತರ ಪ್ರದೇಶ ವಾರಣಾಸಿಯಲ್ಲಿ ಬೆಳ್ಳಂಬೆಳಗ್ಗೆ ಭಕ್ತರು ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಪುಣ್ಯಸ್ನಾನ ಮಾಡಿದರು.
#WATCH | Uttar Pradesh: Devotees take a holy dip in the river Ganga in Varanasi on the occasion of #MakarSankranti pic.twitter.com/YiLdDrgbwk
— ANI UP/Uttarakhand (@ANINewsUP) January 14, 2023
ಅದೇ ರೀತಿ ನಾಗಾ ಸಾಧುಗಳು ಸೇರಿದಂತೆ ಲಕ್ಷಾಂತರ ಯಾತ್ರಾರ್ಥಿಗಳು ಕೋಲ್ಕತ್ತಾದ ಬಾಬುಘಾಟ್, ಗಂಗಾಸಾಗರ ಟ್ರಾನ್ಸಿಟ್ ಕ್ಯಾಂಪ್, ಗಂಗಾಸಾಗರದಲ್ಲಿ ಪವಿತ್ರ ಸ್ನಾನ ಮಾಡಲು ಸೇರಿದ್ದರು. ಕುಂಭಮೇಳದ ನಂತರ ಎರಡನೇ ಅತಿ ದೊಡ್ಡ ಜಾತ್ರೆಯಾದ ಗಂಗಾಸಾಗರ ಮೇಳವು ಕೋವಿಡ್ ನಿರ್ಬಂಧಗಳಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಮರಳುತ್ತಿದೆ.
ಮೇಳಕ್ಕೆ ಸುಮಾರು 30 ಲಕ್ಷ ಯಾತ್ರಾರ್ಥಿಗಳು ಬರುವ ನಿರೀಕ್ಷೆಯಿದ್ದು, ಸರ್ಕಾರ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಮೇಳದಲ್ಲಿ ಕಾರ್ಯಕ್ರಮಗಳು ಸುಗಮವಾಗಿ ನಡೆಯಲು ಮತ್ತು ಸ್ಥಳದಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳಲು ಸುಮಾರು 1100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಮೇಳದ ಸಮಯದಲ್ಲಿ ಅನುಸರಿಸಬೇಕಾದ ಯಾವುದೇ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿಲ್ಲ.