ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ದರುಶನ ಭಾಗ್ಯ ನೀಡುವ ಹಾಸನಾಂಬೆ ದೇವಿಯ ದರುಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.
ಭಾನುವಾರ ವಾರಾಂತ್ಯವಾದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ತಡರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಬೆಳಗ್ಗೆ ದೇವಿಯ ದರುಶನ ಪಡೆದು ಆಶೀರ್ವಾದ ಪಡೆದರು. 1000 ಮತ್ತು 300 ರೂಪಾಯಿ ವೆಚ್ಚದ ವಿಶೇಷ ದರುಶನ ಸಾಲುಗಳು ಕೂಡ ಭರ್ತಿಯಾಗಿವೆ.
ದೇವಿಯ ದರುಶನ ಪಡೆಯಲು ರಾಜ್ಯ, ದೇಶ, ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.