January19, 2026
Monday, January 19, 2026
spot_img

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರೇ ಗಮನಿಸಿ: ಇನ್ಮುಂದೆ ವಸ್ತ್ರ ಸಂಹಿತೆ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದ್ದು, ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಪುರುಷ ಭಕ್ತರು ತಮ್ಮ ಶರ್ಟ್‌ಗಳನ್ನು ತೆಗೆಯುವುದು ಕಡ್ಡಾಯವಾಗಿದೆ.

ಪರ್ಯಾಯ ಶಿರೂರು ಮಠ ಹೊರಡಿಸಿದ ಈ ನಿರ್ದೇಶನವು ಜನವರಿ 19 ಸೋಮವಾರದಿಂದ ಜಾರಿಗೆ ತಂದಿದೆ.

ಮಹಿಳಾ ಭಕ್ತರು ಸಾಧಾರಣ ಮತ್ತು ಸಾಂಪ್ರದಾಯಿಕ ಉಡುಪನ್ನು ಧರಿಸುವುದು ಕಡ್ಡಾಯವಾಗಿದೆ, ಆದರೆ ಜೀನ್ಸ್, ಟಿ-ಶರ್ಟ್, ತೋಳಿಲ್ಲದ ಬಟ್ಟೆ ಅಥವಾ ಇತರ ಸಾಂಪ್ರದಾಯಿಕವಲ್ಲದ ಉಡುಪುಗಳನ್ನು ಧರಿಸಿ ಬರಬಾರದು. ಪುರುಷರು ದರುಶನಕ್ಕೆ ಆಗಮಿಸುವ ವೇಳೆ ಶರ್ಟ್, ಬನಿಯನ್ ತೆಗೆದು ಬರಬೇಕೆಂದು ಶಿರೂರು ಮಠದ ದಿವಾನರಾದ ಉದಯಕುಮಾರ ಸರಳತ್ತಾಯ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಈ ಪದ್ಧತಿ ಮೊದಲು ಬೆಳಿಗ್ಗೆ 11 ಗಂಟೆಯ ಮುಂಜಾನೆ ಮಹಾಪೂಜೆಗೆ ಹಾಜರಾಗುವ ಭಕ್ತರಿಗೆ ಮಾತ್ರ ಅನ್ವಯಿಸುತ್ತಿತ್ತು . ಆದರೆ ಹೊಸ ನಿಯಮದ ಅಡಿಯಲ್ಲಿ, ಈಗ ದಿನವಿಡೀ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಐತಿಹಾಸಿಕ ಶ್ರೀ ಕೃಷ್ಣ ಮಠದ ಪಾವಿತ್ರ್ಯ, ಶಿಸ್ತು ಮತ್ತು ಸಾಂಪ್ರದಾಯಿಕ ಪದ್ಧತಿಗಳನ್ನು ಕಾಪಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Must Read