ಹಾಸನಾಂಬೆ ದರುಶನಕ್ಕೆ ಮುಗಿಬಿದ್ದ ಭಕ್ತರು, ಈವರೆಗೂ ಹರಿದುಬಂದಿದ್ದು ಆರು ಕೋಟಿ ರೂ. ಕಾಂಚಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸನಾಂಬೆ ಮಹೋತ್ಸವ ಐದನೇ ದಿನಕ್ಕೆ ಕಾಲಿಟ್ಟಿದ್ದು, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿದೇವತೆಯನ್ನು ಕಾಣಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ನಾಲ್ಕೇ ದಿನಗಳಲ್ಲಿ ಹಾಸನಾಬ ದೇಗುಲಕ್ಕೆ ಕೋಟಿ ಕೋಟಿ ರೂ. ಆದಾಯ ಹರಿದುಬಂದಿದೆ

ಹಾಸನಾಂಬೆ ಮಹೋತ್ಸವ ಆರಂಭವಾಗಿ ನಾಲ್ಕೇ ದಿನಗಳಲ್ಲಿ ಟಿಕೆಟ್ ಮಾರಾಟದಿಂದ 6 ಕೋಟಿ ರೂ. ಮತ್ತು ಲಾಡು ಪ್ರಸಾದ ಮಾರಾಟದಿಂದ 45 ಲಕ್ಷ ರೂ. ಆದಾಯ ಗಳಿಸಲಾಗಿದೆ.1000ರೂ ಟಿಕೆಟ್ ಮಾರಾಟದಿಂದ 4ಕೋಟಿ 25 ಲಕ್ಷ ರೂ. ಮತ್ತು 300ರೂ ಟಿಕೆಟ್ ಮಾರಾಟದಿಂದ 1 ಕೋಟಿ 30 ಲಕ್ಷ ರೂ. ಆದಾಯ ಗಳಿಸಲಾಗಿದೆ.

ಇಂದಿನ ದಿನ ಸೇರಿದಂತೆ ಹಾಸನಾಂಬೆ ದರ್ಶನಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಹೀಗಾಗಿ ಇತಿಹಾಸದಲ್ಲೇ ಹಾಸನಾಂಬೆ ಆದಾಯ ದಾಖಲೆಯತ್ತ ಸಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!