ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಧನುಷ್ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದು, ದೇವರಿಗೆ ಮುಡಿ ಕೊಟ್ಟಿದ್ದಾರೆ. ಬೆಳಗ್ಗೆಯೇ ಮುಡಿಕೊಟ್ಟು ಹ್ಯಾಟ್ ಹಾಗೂ ಮಾಸ್ಕ್ ಧರಿಸಿ ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ದೇವರ ದರುಶನ ಪಡೆದಿದ್ದಾರೆ. ಮಕ್ಕಳ ಜೊತೆಗೆ ಧನುಷ್ ತಿರುಪತಿಗೆ ಬಂದಿದ್ದು, ಯಾತ್ರಾ ಹಾಗೂ ಲಿಂಗ ಕೂಡ ಮುಡಿ ನೀಡಿದ್ದಾರೆ.
ಕ್ಯಾಪ್ಟನ್ ಮಿಲ್ಲರ್‌ಗಾಗಿ ಉದ್ದ ಕೂದಲು ಬೆಳೆಸಿದ್ದ ಧನುಷ್ ಶೂಟಿಂಗ್ ಮುಗಿದ ನಂತರ ಇದೀಗ ಮುಡಿ ನೀಡಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.