ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎಂಬ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಈ ನಡುವೆ ಎಸ್ ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಕಳೆದ ಹತ್ತು ದಿನಗಳಲ್ಲಿ ನಡೆದ ತನಿಖೆ ಕುರಿತು ತಂಡದಿಂದ ವರದಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನಾಮಿಕ ವ್ಯಕ್ತಿ ಗುರುತಿಸಿರುವ ಸ್ಥಳಗಳ ಪೈಕಿ ಬುಧವಾರ ಕೊನೆಯ ಸ್ಥಳದಲ್ಲಿ ಸಮಾಧಿ ಶೋಧಕ್ಕೆ ಸಿದ್ಧತೆ ನಡೆದಿದ್ದು, ಇದಾದ ಬಳಿಕ ಎಸ್ ಐಟಿ ಮುಂದಿನ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ.
ಈ ನಡುವೆ ಅಸ್ಥಿಗಳ ಪತ್ತೆಗಾಗಿ ಜಿಪಿಆರ್ ಯಂತ್ರ ಬಳಸುವಂತೆ ಅನನ್ಯಾ ಭಟ್ ಎಂಬವರು ಆಗ್ರಹಿಸಿದ್ದು, ಯಂತ್ರ ಬಳಕೆ ಮಾಡದ ಬಗ್ಗೆ ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.