July 12, 2026
Sunday, July 12, 2026
spot_img

ಟ್ರೋಫಿ ಸಿಕ್ತಿದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆದ ಧೋನಿ: ಕೋಚ್ ಬಗ್ಗೆ ಏನ್ ಹೇಳಿದ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಈ ಜಯದೊಂದಿಗೆ ಭಾರತ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದ ಮೊದಲ ತಂಡ ಎಂಬ ಸಾಧನೆ ಮಾಡಿದೆ. ತಂಡದ ಈ ಮಹತ್ವದ ಗೆಲುವಿಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಟೀಮ್ ಇಂಡಿಯಾ ಟ್ರೋಫಿ ಎತ್ತಿಹಿಡಿದ ತಕ್ಷಣವೇ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಸುಮಾರು ಎರಡು ವರ್ಷಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪಾತ್ರವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.

ಇದನ್ನೂ ಓದಿ:

ಫೈನಲ್ ಪಂದ್ಯವನ್ನು ಧೋನಿ ವಿವಿಐಪಿ ಗ್ಯಾಲರಿಯಲ್ಲಿ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜೊತೆ ಕುಳಿತು ವೀಕ್ಷಿಸಿದ್ದರು. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡ ಅವರು, “ಕೋಚ್ ಸಾಹೇಬ್, ನಿಮ್ಮ ನಗು ತುಂಬಾ ಅದ್ಭುತವಾಗಿದೆ. ಗೆಲುವಿನ ಜೊತೆ ನಿಮ್ಮ ನಗು ಇನ್ನಷ್ಟು ಚೆನ್ನಾಗಿದೆ” ಎಂದು ಹಾಸ್ಯಮಯವಾಗಿ ಬರೆದಿದ್ದಾರೆ.

ಇದರ ಜೊತೆಗೆ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನೂ ಧೋನಿ ಶ್ಲಾಘಿಸಿದ್ದಾರೆ. “ಬುಮ್ರಾ ಬಗ್ಗೆ ಎಷ್ಟು ಹೇಳಿದರೂ ಸಾಲದು, ಅವರು ನಿಜವಾದ ಚಾಂಪಿಯನ್ ಬೌಲರ್” ಎಂದು ಅವರು ಹೇಳಿದ್ದಾರೆ.

ಧೋನಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !