ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೂಲ್ ಕ್ಯಾಪ್ಟನ್ ಎಂದೇ ಹೆಸರಾದ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ಗೆ ವಿದಾಯ ಹೇಳ್ತಿದ್ದಾರಾ? ಈ ಅನುಮಾನ ಮೂಡೋದಕ್ಕೆ ಸಿಎಸ್‌ಕೆ ಮಾಡಿರುವ ಟ್ವೀಟ್ ಕಾರಣವಾಗಿದೆ. ಓ ಕ್ಯಾಪ್ಟನ್ ಮೈ ಕ್ಯಾಪ್ಟನ್ ಎನ್ನುವ ಕ್ಯಾಪ್ಷನ್ ಹಾಕಿದ ಸಿಎಸ್‌ಕೆ ಟೀಂ ಎಮೋಷನಲ್ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.
ಧೋನಿ ಫೋಟೊ ಹಾಗೂ ವಿಡಿಯೋಗಳ ಅದ್ಭುತ ವಿಡಿಯೋ ಇದಾಗಿದೆ, ವಿಡಿಯೋ ಕಡೆಗೆ ಧೋನಿ ಪೆವಿಲಿಯನ್‌ನತ್ತ ತೆರಳುತ್ತಾರೆ. ಇದನ್ನು ಕಂಡ ಅಭಿಮಾನಿಗಳು ಧೋನಿ ನಿವೃತ್ತಿ ನೆನೆದು ಕಣ್ಣೀರಾಗಿದ್ದಾರೆ. ಧೋನಿ ನಿವೃತ್ತಿ ಪಡೆಯಬೇಡಿ ಎಂದು ಪರಿಪರಿಯಾಗಿ ಬೇಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ..
https://twitter.com/ChennaiIPL/status/1668612943775424514?s=20