ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ಕ್ರಿಕೆಟಿಗ ಧೋನಿ ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದು, ಸಿನಿ ರಂಗದತ್ತ ತಮ್ಮ ಒಲವನ್ನು ತೋರಿದ್ದಾರೆ. ಇತ್ತೀಚೆಗಷ್ಟೇ ಧೋನಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಮತ್ತು ಸಿನಿಮಾಗಳನ್ನು ನಿರ್ಮಿಸಲಿದ್ದಾರೆ ಎಂಬ ಹಲವು ಸುದ್ದಿ ಬಂದಿದ್ದವು. ಸುದ್ದಿಗೆ ಪುಷ್ಟಿ ಕೊಡುವಂತೆ ಧೀನಿ ಎಂಟರ್‌ಟೈನ್‌ಮೆಂಟ್ ಶುರು ಮಾಡಿದ್ದಾಗಿ ಕೂಡಾ ಘೋಷಣೆಯಾಗಿತ್ತು. ಇದೀಗ ಈ ದೀಪಾವಳಿಗೆ ಧೋನಿ ತಮ್ಮ ಕಂಪನಿಯಿಂದ ಮೊದಲ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿದುಬಂದಿದೆ.
ಡಿ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆಯಿಂದ ತಮ್ಮ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಿಸಲಿದ್ದಾರೆ. ಧೋನಿ ಪತ್ನಿ ಸಾಕ್ಷಿ ಈ ಚಿತ್ರಕ್ಕೆ ಕಥೆ ಬರೆದಿದ್ದು, ರಮೇಶ್ ತಮಿಳಿನಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಫ್ಯಾಮಿಲಿ ಎಂಟರ್‌ಟೈನರ್‌ನಂತೆ ಇರಲಿದೆ ಎಂದು ಘೋಷಿಸಲಾಗಿದೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
Legendary cricketer @msdhoni & his wife @SaakshiSRawat's production house @DhoniLtd will produce its 1st feature film in Tamil! Conceptualised by Sakshi herself, the Tamil film will be a family entertainer that is to be directed by @ramesharchi@HasijaVikas @PriyanshuChopra pic.twitter.com/viI8LYdpgy
— BA Raju's Team (@baraju_SuperHit) October 24, 2022
ಹಲವು ವರ್ಷಗಳಿಂದ ಕ್ರಿಕೆಟ್ ಮೈದಾನದಲ್ಲಿ ಸಕ್ಸಸ್ ಕಂಡಿರುವ ಧೋನಿ ಸಿನಿಮಾ ಕ್ಷೇತ್ರದಲ್ಲಿ ಯಾವ ರೀತಿಯ ಯಶಸ್ಸು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಶೀಘ್ರದಲ್ಲೇ ಇನ್ನಷ್ಟು ಚಿತ್ರಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.