March 13, 2026
Friday, March 13, 2026
spot_img

ಬರೀ ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲೇ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಧುರಂಧರ್‌ 2

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಹೊಸ ದಾಖಲೆ ಬರೆಯಲು ರೆಡಿ ಆಗಿದೆ.

ಈ ಚಿತ್ರ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಹಿಂದಿನ ದಿನ ಅಂದರೆ ಮಾರ್ಚ್​ 18ರಂದು ಸಿನಿಮಾಗೆ ಸಾಕಷ್ಟು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಶೋ ಹೌಸ್​​​ಫುಲ್ ಆಗಿದೆ. ಇದರಿಂದ ಸಿನಿಮಾಗೆ ದೊಡ್ಡ ಮೊಟ್ಟದಲ್ಲಿ ಹಣ ಹರಿದು ಬರುತ್ತಿದೆ. ಅಡ್ವಾನ್ಸ್ ಬುಕಿಂಗ್​​ನಿಂದ ಚಿತ್ರಕ್ಕೆ ವಿಶ್ವಾದ್ಯಂತ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

‘ಧುರಂಧರ್ 2’ ಸಿನಿಮಾದ ಎಲ್ಲಾ ಟಿಕೆಟ್​​​ಗಳನ್ನು ಬಿಡುಗಡೆ ಮಾಡಿಲ್ಲ. ಕೇವಲ ಮಾರ್ಚ್ 18ರ ಟಿಕೆಟ್​​​ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಮಾರ್ಚ್ 19ರ ಟಿಕೆಟ್​​​ಗಳನ್ನು ಕೂಡ ಬುಕಿಂಗ್​​ ಮಾಡುವ ಅವಕಾಶ ನೀಡಿದರೆ ಸಿನಿಮಾ ಅಬ್ಬರಿಸೋದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಈಗಾಗಲೇ ದೇಶಾದ್ಯಂತ 4.7 ಲಕ್ಷ ಟಿಕೆಟ್​​​ಗಳು ಸೇಲ್ ಆಗಿವೆ. ಇದರಿಂದ ಭಾರತದಲ್ಲಿ 24.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಪವನ್ ಕಲ್ಯಾಣ್ ಅವರ ‘ಒಜಿ’ ಸಿನಿಮಾ ಪ್ರೀಮಿಯರ್ ಶೋನಿಂದ 25 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ. ಆ ದಾಖಲೆಯನ್ನು ‘ಧುರಂಧರ್ 2’ ಸುಲಭದಲ್ಲಿ ಬ್ರೇಕ್ ಮಾಡಲಿದೆ ಎಂದು ಊಹಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !