ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈಗಾಗಲೇ ಸಿನಿಮಾದ ಕಲೆಕ್ಷನ್ 400 ಕೋಟಿ ರೂಪಾಯಿ ಸಮೀಪಿಸುತ್ತಿದೆ.
ಈ ಸಿನಿಮಾದ ಕ್ರೇಜ್ ಎಷ್ಟರಮಟ್ಟಿಗೆ ಇದೆ ಎಂದರೆ ಟೀಮ್ ಇಂಡಿಯಾ ಆಟಗಾರರರು ಕೂಡ ‘ಧುರಂಧರ್’ ವೀಕ್ಷಿಸಿದ್ದಾರೆ. ಅವರಿಗಾಗಿ ಇಡೀ ಆಡಿ ಬುಕ್ ಮಾಡಲಾಗಿತ್ತು.
ಡಿಸೆಂಬರ್ 17ರಂದು ಇಂಡಿಯಾ ವರ್ಸಸ್ ಸೌತ್ ಆಫ್ರಿಕಾ ಟಿ20 ಪಂದ್ಯ ನಡೆಯಲಿದೆ. ಅದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಲಖನೌ ತಲುಪಿದ್ದಾರೆ. ಸೋಮವಾರ (ಡಿಸೆಂಬರ್ 15) ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದ ಆಟಗಾರರು ಸಮಯ ಮಾಡಿಕೊಂಡು ಸಿನಿಮಾ ನೋಡಲು ತೆರಳಿದ್ದಾರೆ. ಲಖನೌನ ಮಲ್ಟಿಪ್ಲೆಕ್ಸ್ನಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಟೀಮ್ ಇಂಡಿಯಾ ಆಟಗಾರರಿಗಾಗಿ ಸೋಮವಾರ ರಾತ್ರಿ 8.10ರ ಶೋ ಬುಕ್ ಆಗಿತ್ತು. ಸಿನಿಮಾ ಮುಗಿದಾಗ ಮಧ್ಯರಾತ್ರಿ 12.10 ಆಗಿತ್ತು. ಕ್ಯಾಪ್ಟನ್ ಸೂರ್ಯಕುಮಾರ್ ಯಾಧವ್, ಕೋಚ್ ಗೌತಮ್ ಗಂಭೀರ್, ಉಪ ನಾಯಕ ಶುಭಮನ್ ಗಿಲ್ ಜೊತೆ ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್ ಮುಂತಾದ ಆಟಗಾರರು ಸಿನಿಮಾ ನೋಡಿ ಎಂಜಾಯ್ ಮಾಡಿದರು.
ಟೀಮ್ ಇಂಡಿಯಾ ಆಟಗಾರರು ಹಾಗೂ ಅವರ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಈ ಪ್ರದರ್ಶನದಲ್ಲಿ ಅವಕಾಶ ಇರಲಿಲ್ಲ. ಆಟಗಾರರ ಭದ್ರತೆ ಮತ್ತು ಅನುಕೂಲದ ದೃಷ್ಟಿಯಿಂದ ಪೂರ್ತಿ ಆಡಿಯನ್ನು ಬುಕ್ ಮಾಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

