ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂ.ಜಿ. ರಸ್ತೆಯ ಜಾಯ್ ಅಲುಕ್ಕಾಸ್ ಮಳಿಗೆಯಲ್ಲಿ ಬೆಲೆ ಬಾಳುವ ವಜ್ರದ ಉಂಗುರ ಕಳ್ಳತನ ಮಾಡಿರುವ ಘಟನೆ ನಡೆದಿದೆ. ನಕಲು ಉಂಗುರವನ್ನು ಅದರಲ್ಲಿ ಇಟ್ಟು ಖದೀಮ ಮೂಲ ವಜ್ರದ ಉಂಗುರವನ್ನು ಕದ್ದು ಪರಾರಿಯಾಗಿದ್ದಾನೆ.
75 ಲಕ್ಷ ಮೌಲ್ಯದ ವಜ್ರದ ಉಂಗುರ ಕಳವಾಗಿದೆ. ಗ್ರಾಹಕರ ವೇಷ ಧರಿಸಿ ವಜ್ರದ ಉಂಗುರ ಕದಿಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫೆ.18ರಂದು ಗ್ರಾಹಕರ ವೇಷದಲ್ಲಿ ಬಂದ ಖದೀಮ ಜಾಯ್ ಅಲುಕ್ಕಾಸ್ ಅಂಗಡಿಗೆ ನುಗ್ಗಿ ವಜ್ರದ ಉಂಗುರ ಕದ್ದಿದ್ದ. ಈ ಕಳ್ಳ ನಗರದ ಹಲವೆಡೆ ಚಿನ್ನಾಭರಣ ಮಳಿಗೆಗಳಲ್ಲಿ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.